ಫಲಿತಾಂಶ ಕುಂಠಿತವಾದರೆ ಶಿಕ್ಷಕರೇ ಹೊಣೆ

FotoJet
Published on

ಕೋಲಾರ: ಗುಣಾತ್ಮಕ ಲಿತಾಂಶ ಹೆಚ್ಚಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಸಮರ್ಪಕವಾಗಿ ಜಾರಿಗೆ ತರಬೇಕು. ಲಿತಾಂಶ ಕುಂಠಿತಗೊಂಡರೆ ಆಯಾ ಶಾಲೆಯ ಬೋಧಕ ವರ್ಗದವರನ್ನೇ ಹೊಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್​ಎಸ್​ಎಲ್​ಸಿ ಪರೀಕ್ಷಾ ಲಿತಾಂಶ ಸುಧಾರಣೆ ಕುರಿತ ಕಾರ್ಯಾಗಾರ ಹಾಗೂ ಪರೀಕ್ಷಾ ಮಾರ್ಗದರ್ಶಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆಗಳಲ್ಲಿ ಶೈಕ್ಷಣಿಕ ಪ್ರಗತಿ ಹಾಗೂ ಸಾಮಾಜಿಕ ಜವಾಬ್ದಾರಿ ಶಿಕ್ಷಕರ ಕರ್ತವ್ಯ. ಅದರಿಂದ ತಪ್ಪಿಸಿಕೊಳ್ಳಲಾಗದು. ಈಗಾಗಲೇ ನೀಡಲಾಗಿರುವ ಸುಧಾರಣೆ ಕ್ರಮಗಳನ್ನು ಹಂತಹಂತವಾಗಿ ಜಾರಿಗೆ ತರಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಬೇಕು ಎಂದು ಸೂಚಿಸಿದರು.

ವಿಷನ್​ ಕೋಲಾರ, ಸ್ಪರ್ಧಾತ್ಮಕ ಪರೀಕ್ಷಗಳ ಕೈಪಿಡಿಗಳು, ಸಿಇಟಿ ಮತ್ತು ನೀಟ್​ ಪುಸ್ತಕಗಳ ವಿತರಣೆ ಮುಂತಾದ ಕ್ರಮಗಳು ಮುಖ್ಯವಾಗಿವೆ. ಅದೇ ನಿಟ್ಟಿನಲ್ಲಿ ಎಸ್​ಎಸ್​ಎಲ್​ಸಿ ಮಾರ್ಗದರ್ಶಿ ಕೈದೀವಿಗೆ ಪುಸ್ತಕಗಳನ್ನು ವಿದ್ಯಾರ್ಥಿಗಳ ಕೈಗಿಡುತ್ತಿದೆ. ನೀಡಲಾದ ಪಠ್ಯಪರಿಕರಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಎಚ್ಚರಿಸಿದರು.

ಜಿಲ್ಲೆಯ 10 ಪ್ರೌಢ ಶಾಲೆಗಳಿಗೆ ಸ್ಮಾರ್ಟ್​ ಕ್ಲಾರ್ಸ್​ ಸಲಕರಣೆಗಳನ್ನು ವಿತರಿಸಲಾಗಿದ್ದು, ಇದರ ಸಂಪೂರ್ಣ ಪ್ರಯೋಜನವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲ್ಪಿಸಬೇಕು. ಯೋಜನೆಯಡಿ ಲಭ್ಯವಿರುವ ಪಠ್ಯಾಂಶಗಳನ್ನು ಸರ್ಮಪಕವಾಗಿ ಅರ್ಥೈಸಿಕೊಂಡು ಮಕ್ಕಳಿಗೆ ಮನದಟ್ಟಾಗುವಂತೆ ಪಾಠ ಮಾಡಬೇಕು ಎಂದು ತಿಳಿಸಿದರು.

ಶಿಕ್ಷಕರ ಕೊರತೆಯನ್ನು ಸ್ಮಾರ್ಟ್​ ಕ್ಲಾರ್ಸ್​ಗಳ ಮೂಲಕ ನೀಗಿಸಿಕೊಳ್ಳಬೇಕು. ಶಾಲೆಗಳಲ್ಲಿ ಕಾಣುವ ಲಿತಾಂಶ ವಿಫಲತೆಗೆ ಮುಖ್ಯಶಿಕ್ಷಕರು ಜವಾಬ್ದಾರಿ ಹೊರಬೇಕು. ಮಕ್ಕಳ ಶೈಕ್ಷಣಿಕ ಗುಣ-ಮಟ್ಟವನ್ನು ಕಾಪಾಡುವುದರ ಜತೆಗೆ ಸಮಾಜದ ಓರೆಕೋರೆಗಳನ್ನು ಚಿಗುರಿನಲ್ಲೇ ತಿದ್ದುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪರೀೆಯ ದೃಷ್ಟಿಯಿಂದ ಮುಂದಿನ ಮೂರು ತಿಂಗಳು ಮುಖ್ಯ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಪ್ರತಿ ಶಿಕ್ಷಕರಿಗೂ ಅವರದೇ ಆದ ಜವಾಬ್ದಾರಿಗಳಿವೆ. ಈಗಾಗಲೇ ಬಹುತೇಕ ಎಲ್ಲ ಶಾಲೆಗಳಲ್ಲಿ ಪಠ್ಯಕ್ರಮ ಪೂರ್ಣಗೊಳಿಲಾಗಿರುತ್ತದೆ. ಮಾರ್ಗ ಸೂಚಿಗಳ ಸಹಾಯದಿಂದ ಹೆಚ್ಚು ಅಂಕಗಳಿಸಲು ವಿದ್ಯಾರ್ಥಿಗಳನ್ನು ಸನ್ನದ್ದು ಮಾಡಬೇಕು ಎಂದು ಎಸ್​ಪಿ ಬಿ.ನಿಖಿಲ್​ ಹೇಳಿದರು.

ಡಯಟ್​ ಪ್ರಾಂಶುಪಾಲ ಚಂದ್ರಪ್ಪ ಮಾತನಾಡಿ, ಪ್ರತಿವರ್ಷ ಗುಣಾತ್ಮಕ ಲಿತಾಂಶ ಹೆಚ್ಚಿಸಲು ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದಾಗ್ಯೂ ಸಾಧನೆ ಮಟ್ಟ ಕಡಿಮೆಯಾಗಿದೆ ಎಂದರು.

ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಮುಖ್ಯ ಶಿಕ್ಷಕರು ಅರಿತು ಪರಿಹರಿಸಿಕೊಳ್ಳಲು ಮುಂದಾಗಬೇಕು. ಪ್ರಸ್ತುತ ನಮ್ಮಲಿರುವ ಮನ@ಸ್ಥಿತಿ ಬದಲಿಸಿಕೊಂಡು ಇಚ್ಚಾ ಶಕ್ತಿ ಬೆಳಸಿಕೊಳ್ಳಬೇಕು. ಶ್ರದ್ಧೆಯಿಂದ ಕಲಿಸಿದರೆ ಎಲ್ಲ ವಿದ್ಯಾರ್ಥಿಗಳು ಉತ್ತಮ ಲತಾಂಶ ಗಳಿಸಬಲ್ಲರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ -ಶಿಕ್ಷಣ ಉಪ ನಿರ್ದೇಶಕ ಕೃಷ್ಣಮೂರ್ತಿ, ಡಯಟ್​ ತಾಂತ್ರಿಕಾಧಿಕಾರಿ ನಾರಾಯಣಸ್ವಾಮಿ, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಮೈಲಾರಪ್ಪ, ಸಹಾಯಕ ನಿರ್ದೇಶಕರಾದ ಮುರಳಿ ಹಾಜರಿದ್ದರು.

ಫಲಿತಾಂಶ ವೃದ್ಧಿಗೆ ಕ್ರಮವಹಿಸಿ

ಜಿಲ್ಲೆಯ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಹಂತಹಂತವಾಗಿ ಮಕ್ಕಳಿಂದ ಅಭ್ಯಾಸ ಮಾಡಿಸಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ಸಲಹೆ ನೀಡಿದರು.

ಕೇವಲ ಪಠ್ಯಕ್ರಮದ ಜತೆಗೆ ಹೆಚ್ಚುವರಿ ಕಲಿಕಾ ಸಾಮಗ್ರಿಗಳಾಗಿ ಬಳಸಿಕೊಳ್ಳಬೇಕೆ ವಿನ@ ಇದನ್ನೇ ಮುಖ್ಯ ಪಠ್ಯವಾಗಿ ಅಭ್ಯಾಸಿಸಬಾರದು. ಆ ಮೂಲಕ ಎಸ್​ಎಸ್​ಎಲ್​ಸಿ ಪರೀಕ್ಷೆಗಳಲ್ಲಿ ಲಿತಾಂಶ ವೃದ್ಧಿಪಡಿಸಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net