ಪ್ರಸ್ತಾವ ಸಲ್ಲಿಸಿದರೆ ಸುರೇಬಾನಗೆ ಪಪಂ ಸ್ಥಾನ

oplus_2
oplus_2
Published on

ರಾಮದುರ್ಗ: ಸುರೇಬಾನ-ಮನಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಜನಸಂಖ್ಯೆಯಿದ್ದು, ಎರಡೂ ಪಂಚಾಯಿತಿ ಒಗ್ಗೂಡಿಸಿ ಪಟ್ಟಣ ಪಂಚಾಯಿತಿಯನ್ನಾಗಿ ಪರಿವರ್ತನೆ ಮಾಡಿ ಮೇಲ್ದರ್ಜೆಗೇರಿಸುವಂತೆ ಗ್ರಾಪಂ ಸದಸ್ಯರು ಠರಾವು ಪಾಸ್ ಮಾಡಿ ಪ್ರಸ್ತಾವನೆ ಸಲ್ಲಿಸಿದರೆ ಸಂಬಂಧಪಟ್ಟ ಸಚಿವರು ಹಾಗೂ

ಅಧಿಕಾರಿಗಳೊಂದಿಗೆ ಚರ್ಚಿಸಿ ಮೇಲ್ದರ್ಜೆಗೇರಿಸಲು ಶ್ರಮಿಸುತ್ತೇನೆ ಎಂದು ಶಾಸಕ ಅಶೋಕ ಪಟ್ಟಣ ಭರವಸೆ ನೀಡಿದರು.

ತಾಲೂಕಿನ ರೇವಡಿಕೊಪ್ಪ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಟಿ ಕಾಲನಿಗಳಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಲ್ಯಾಂಡ್ ಆರ್ಮಿ ಸಹಯೋಗದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸುರೇಬಾನ ಗ್ರಾಪಂ ಅಧ್ಯಕ್ಷೆ ನಾಗರತ್ನಾ ಜಡಿ, ಉಪಾಧ್ಯಕ್ಷೆ ಬಸವ್ವ ಭಜಂತ್ರಿ, ಸದಸ್ಯರಾದ ಶಾಂತವ್ವ ಮಾದರ, ಅಶ್ರ್ ಬಂದಗಿ, ಗ್ರಾ.ಪಂ ಮಾಜಿ ಅಧ್ಯಕ್ಷ ಶಂಕ್ರಯ್ಯ ಚಿಕ್ಕಮಠ, ಮುಖಂಡರಾದ ಪರಪ್ಪ ಜಂಗವಾಡ, ಗಿರಿಯಪ್ಪ ಹಣಸಿ, ದ್ಯಾವಪ್ಪ ಜಾಲಿಹಾಳ, ಶರಣಪ್ಪ ಬ್ಯಾಹಟ್ಟಿ, ರಾಮಣ್ಣ ಹಣಸಿ, ಹಣಮಂತ ಹಣಸಿ, ಮುತ್ತಪ್ಪ ಸುಂಕದ, ಗಿರಿಯಪ್ಪ ತಳವಾರ, ಪಿಡಿಒ ಈರನಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net