ಜ್ಞಾನವಂತರು ಹೆಚ್ಚಿದರೆ ಗ್ರಾಮ ಪ್ರಗತಿ

12blh1-sampagavi
filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 44;
Published on

ಬೈಲಹೊಂಗಲ: ಗ್ರಾಮೀಣ ಪ್ರದೇಶದಲ್ಲಿ ಜ್ಞಾನವಂತರು ಹೆಚ್ಚಾದರೆ ಆ ಗ್ರಾಮವು ಸುಂದರವಾಗಲಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ತಾಲೂಕಿನ ಸಂಪಗಾಂವಿ ಗ್ರಾಮದ ಆರ್‌ಇಎಸ್ ಪ್ರೌಢಶಾಲೆಯ ಆವರಣದಲ್ಲಿ ವಿಶ್ವ ಮಾನವ ಬಂಧುತ್ವ ವೇದಿಕೆ ಹಾಗೂ ಸಂಪಗಾಂವ ನಾಗರಿಕರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ ಮತ್ತು ವಿವಿಧ ಕ್ಷೇತ್ರದ ಸಾಧಕರ, ನಿವೃತ ನೌಕರರ, ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೈಕ್ಷಣಿಕ ಪ್ರಗತಿಯಾಗಬೇಕಾದರೆ ಊರಿನ ಜನರು ಒಗ್ಗಟ್ಟಾಗಬೇಕು ಎಂದರು.

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ವ್ಯಾಪಾರಿಕರಣವಾಗದೇ ಜನರಲ್ಲಿ ಮಹತ್ವದ ಮೌಲ್ಯ ತುಂಬುವಲ್ಲಿ ಪ್ರಯತ್ನಿಸಬೇಕು. ಮೌಲ್ಯವಿಲ್ಲದ ಶಿಕ್ಷಣಕ್ಕೆ ಯಾವತ್ತೂ ಸಮಾಜದಲ್ಲಿ ಬೆಲೆ ಇಲ್ಲವಾಗಿದ್ದು ಮಕ್ಕಳಲ್ಲಿ ನೈತಿಕತೆ ಭಾವನೆ ತುಂಬುವುದು ಅತ್ಯವಶ್ಯವಾಗಿದೆ ಎಂದರು.

ಸಂಪಗಾಂವ ಗ್ರಾಮದ ಕಟಾಪೂರಿಮಠದ ಚನ್ನವೀರ ಸ್ವಾಮೀಜಿ ಮಾತನಾಡಿದರು. ತಹಸೀಲ್ದಾರ್ ಹಣಮಂತ ಶಿರಹಟ್ಟಿ, ಜಿಪಂ ಸದಸ್ಯ ರೋಹಿಣಿ ಪಾಟೀಲ, ಆರ್‌ಇಎಸ್ ಸಂಸ್ಥೆಯ ಚೇರ್ಮನ್ ಶಂಕರೆಪ್ಪ ಶಿದ್ನಾಳ, ಕಸನೌ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ರಾಯವ್ವಗೋಳ, ಗ್ರಾಪಂ ಅಧ್ಯಕ್ಷ ಅನಿಲದೇವ ನೇಸರಗಿ, ಉಪಾಧ್ಯಕ್ಷೆ ಜಯಲಕ್ಷ್ಮೀ ಮಾಡಮಗೇರಿ, ಜಿಲ್ಲಾ ನಿವೃತ ನೌಕರರ ಸಂಘದ ಅಧ್ಯಕ್ಷ ಎಸ್.ಜಿ.ಶಿದ್ನಾಳ, ಆರ್‌ಇಎಸ್ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಉಳ್ಳೇಗಡ್ಡಿ, ಹುಬ್ಬಳ್ಳಿ ಚೇತನ ಕಾಲೇಜು ಸಂಸ್ಥಾಪಕ ಗುರಶಾಂತ ವಳಸಂಗ, ಎಸ್‌ಎನ್‌ವಿವಿಎಸ್ ಸಂಸ್ಥೆಯ ನಿರ್ದೇಶಕ ವಿರೂಪಾಕ್ಷ ಕೋರಿಮಠ, ಮುಖ್ಯೋಪಾಧ್ಯಾಯ ಶ್ರೀಕಾಂತ ಉಳ್ಳೇಗಡ್ಡಿ, ಡಾ.ಬಿ.ಬಿ.ಪುಟ್ಟಿ, ಭಾರತ ವೈಭವ ಸಂಪಾದಕ ಪ್ರಶಾಂತ ಐಹೊಳೆ, ಅನಂತಕುಮಾರ ಬ್ಯಾಕೋಡ, ಸಿ.ಬಿ.ಪುಟ್ಟಿ, ಡಾ.ಬಾಬು ನಾಯ್ಕ, ರುದ್ರಪ್ಪ ಟೊಣ್ಣಿ, ಗ್ರಾಪಂ ಸದಸ್ಯ ಮಂಜುನಾಥ ಸಿಡ್ಲೆವ್ವಗೋಳ ಹಾಗೂ ಮುಖಂಡ ಮಂಜು ಉಳವಿ ಇತರರು ಇದ್ದರು.

ಯು.ಡಿ.ತಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ಡಿ.ಗಂಗಣ್ಣವರ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್.ಕೋಳಿ ನಿರೂಪಿಸಿದರು. ಶಿಕ್ಷಕ ಬಸವರಾಜ ಚಿವಟಗುಂಡಿ ವಂದಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಮಾಜಿ ಸೈನಿಕರನ್ನು, ನಿವೃತ ನೌಕರರನ್ನು, ವಿವಿಧ ಕ್ಷೇತ್ರದ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net