

ಚಿಕ್ಕೋಡಿ: ಗ್ರಾಹಕರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿದಾಗ ಸಹಕಾರ ಸಂಘಗಳ ಮಾತೃಸಂಸ್ಥೆಗಳು ಬೆಳೆಯಲು ಸಾಧ್ಯ ಎಂದು ಸಂಪಾದನಾ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಪ್ರಭುದೇವ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಸಭಾಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಹಕಾರಿಯ 7ನೇ ವಾರ್ಷಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಭುದೇವರ ಸಹಕಾರಿ ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಹೆಮ್ಮರವಾಗಿ ಬೆಳೆದು 21 ಲಕ್ಷ ರೂ. ಲಾಭಗಳಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುಭಾಷ ಕವಲಾಪೂರೆ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರಿ 21.50 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.10 ಲಾಭಾಂಶ ವಿತರಿಸಲಾಗುತ್ತಿದೆ. 858 ಸದಸ್ಯರು, 29.31 ಲಕ್ಷ ರೂ. ಷೇರು ಬಂಡವಾಳ, 18.21 ಕೋಟಿ ರೂ. ಠೇವಣಿ, 19.30 ಕೋಟಿ ರೂ. ದುಡಿಯುವ ಬಂಡವಾಳ, 77.13 ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿದೆ ಎಂದರು.
ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ ಮಗದುಮ್ಮ ಆರ್ಥಿಕ ವರ್ಷದ ವರದಿ ಓದಿದರು. ನಿರ್ದೇಶಕರಾದ ಮಹೇಶ ಭಾತೆ, ಸದಾಶಿವ ಮಾಳಿ, ಇರ್ಷಾದ್ ಇಪ್ಪೆರಿ, ನೀಲಕಂಠ ವಂಟಮುತ್ತೆ, ಕುಮಾರ ಮದನ್ನವರ, ಸತೀಶ ನೂಲಿ, ಕಾಂಚನ ದೊಡ್ಡಮನಿ, ಶೋಭಾ ಹಾಗರಗಿ, ಸಂಜು ಹಿರೇಮಠ, ಶಂಕರ ಮೇದಾರ, ನೀಲಕಂಠ ವಂಟಮುತ್ತೆ, ಸಂಗಪ್ಪ ಹಂಪಣ್ಣವರ, ಉಪಾಧ್ಯಕ್ಷ ಪ್ರಭು ಬೆಲ್ಲದ, ಆರ್.ಎಂ.
ಬುನವಾಳೆ, ಎನ್.ಎಸ್.ವಂಟಮುತ್ತೆ ಇತರರಿದ್ದರು.