ಕಸ್ತೂರಿ ರಂಗನ್ ವರದಿ ಜಾರಿಯಾದರೆ ಸಂಕಷ್ಟ

26 nrp 4
Published on

ಎನ್.ಆರ್.ಪುರ: ಕಸ್ತೂರಿ ರಂಗನ್ ವರದಿ, ಸೆಕ್ಷನ್ 4 ಜಾರಿಯಾದರೆ ಅಭಿವೃದ್ಧಿ ಹಿನ್ನೆಡೆ ಹಾಗೂ ರೈತರು ತೀವ್ರ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ನಾಗಲಾಪುರ ಗ್ರಾಪಂ ಅಧ್ಯಕ್ಷ ರೀನಾಬೆನ್ನಿ ಆತಂಕ ವ್ಯಕ್ತಪಡಿಸಿದರು. ನಾಗಲಾಪುರ ಗ್ರಾಪಂನಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಅನೇಕ ಅರಣ್ಯ ಕಾಯ್ದೆಗಳಿವೆ. ಈ ಮಧ್ಯೆ ಕಸ್ತೂರಿರಂಗನ್ ವರದಿ ಜಾರಿಗೆ ಪ್ರಯತ್ನ ನಡೆಯುತ್ತಿದೆ ಎಂದರು.
ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಕಾಡನ್ನು ರಕ್ಷಣೆ ಮಾಡುತ್ತಿರುವುವರು ರೈತರು. ಕಾಡು ಪ್ರಾಣಿಗಳಿಗೆ ಆಹಾರ ನೀಡುತ್ತಿರುವುವರು ರೈತರು. ಪ್ರಸ್ತುತ ಕಸ್ತೂರಿ ರಂಗನ್ ವರದಿ, ಸೆಕ್ಷನ್ 4 ನೋಟಿಫಿಕೇಷನ್ ಜಾರಿಯಾಗುತ್ತಿದೆ. ಇದನ್ನು ಎಲ್ಲ ಗ್ರಾಪಂಗಳು ವಿರೋಧಿಸಿ ನಿರ್ಣಯ ಕೈಗೊಳ್ಳಬೇಕು ಎಂದರು. ಸದಸ್ಯರಾದ ಚಿನ್ನಯ್ಯ, ರಮೇಶ, ಶೋಭ,ಸುಮಿತ್ರ, ಪ್ರೇಮಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net