ಹೈಕಮಾಂಡ್ ಒಪ್ಪಿದರೆ ಸ್ಪರ್ಧೆ ಖಚಿತ

geeta shivaraj kumar
ಗೀತಾ ಶಿವರಾಜ್‌ಕುಮಾರ್
Published on

ಶಿವಮೊಗ್ಗ: ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಹೈಕಮಾಂಡ್ ಒಪ್ಪಿದರೆ ಸ್ಪರ್ಧೆ ಮಾಡುವುದಾಗಿ ಗೀತಾ ಶಿವರಾಜ್‌ಕುಮಾರ್ ಸ್ಪಷ್ಟಪಡಿಸಿದರು.

ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಆಸೆ ಇದೆ. ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಸಾಮಾಜಿಕ ಸೇವೆ ಮಾಡುವ ಆಸಕ್ತಿ ಇದೆ. ಸ್ಪರ್ಧೆಗೆ ಇಲ್ಲಿನ ವಾತಾವರಣವೂ ಉತ್ತಮವಾಗಿದೆ. ನನಗೆ ಮೂವರು ಹೈಕಮಾಂಡ್(ಪತಿ, ಸಹೋದರ ಮತ್ತು ಕೇಂದ್ರದ ನಾಯಕರು) ಇದ್ದಾರೆ. ಮೂವರೂ ಒಪ್ಪಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಚಾರ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net