ಹೃದಯದ ಬಡಿತ ನಿಂತರೆ ಜೀವನವೇ ಅಂತ್ಯ

heart
Published on

ಮಾಗಡಿ: ಮಾನವನ ಬಹುಮುಖ್ಯ ಅಂಗವಾದ ಹೃದಯದ ಬಡಿತ ನಿಂತರೆ ಉಸಿರೇ ನಿಂತಂತೆ. ಜೀವನವೇ ಅಂತ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ 6 ತಿಂಗಳಿಗೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯ ಎಂದು ನಾರಾಯಣ ಹೆಲ್ತ್​ ಸಿಟಿಯ ಮ್ಯಾನೇಜರ್​ ದೇವರಾಜ ನಾಯಕ್​ ತಿಳಿಸಿದರು.

ಮಾಗಡಿ ಟೌನ್​ನ ಕಲ್ಯಾಗೇಟ್​ ಸರ್ಕಾರಿ ಶಾಲಾ ಆವರಣದಲ್ಲಿ ರೋಟರಿ ಮಾಗಡಿ ಸೆಂಟ್ರಲ್​ ಹಾಗೂ ರೋಟರಿ ಬೆಂಗಳೂರು ವಿಜಯನಗರ ರೋಟರಿ ಕ್ಲಬ್​ಗಳ ಸಂಯುಕ್ತಾಶ್ರಯದಲ್ಲಿ ನಾರಾಯಣ ಹೃದಯಾಲಯ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ್ದ ಹೃದಯ ಹಾಗೂ ಮಹಿಳೆಯರಿಗಾಗಿ ಸ್ತನ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ರೋಟರಿ ಮಾಗಡಿ ಸೆಂಟ್ರಲ್​ ಅಧ್ಯ ಡಾ. ಮಂಜುನಾಥ್​ ಬೆಟಗೇರಿ ಮಾತನಾಡಿ, ಸಾಮಾನ್ಯವಾಗಿ ಇಸಿಜಿಗೆ 350 ರೂ. ಹಾಗೂ ಡಾಕ್ಟರ್​ ಚಾರ್ರ್ಜ ಸೇರಿ 500 ರೂ. ವೆಚ್ಚವಾಗುತ್ತದೆ. ಆದರೆ ಈ ಶಿಬಿರದಲ್ಲಿ ಈ ಎಲ್ಲ ಸೇವೆಗಳನ್ನು ಉಚಿತವಾಗಿ ನೀಡುವ ಮೂಲಕ ರೋಟರಿ ಕ್ಲಬ್​ ಜನಸೇವೆಗೆ ಕೈಜೋಡಿಸಿದೆ ಎಂದರು.

ರೋಟರಿ ಬೆಂಗಳೂರು ವಿಜಯನಗರ ಕ್ಲಬ್​ ಅಧ್ಯ ಸುದರ್ಶನ ರೆಡ್ಡಿ ಮಾತನಾಡಿ, ಸ್ತನ ಕ್ಯಾನ್ಸರ್​ ತಪಾಸಣೆಗೆ ಹೊರಗಿನ ಆಸ್ಪತ್ರೆಗಳಲ್ಲಿ ಹೆಚ್ಚಿನ ವೆಚ್ಚವಾಗುತ್ತದೆ. ಆದರೆ ನಮ್ಮ ರೋಟರಿ ಕ್ಲಬ್​ ಈ ಸೇವೆಯನ್ನು ಮಾಗಡಿ ಪ್ರದೇಶದ ಜನತೆಗೆ ಉಚಿತವಾಗಿ ನೀಡಿದೆ ಎಂದು ತಿಳಿಸಿದರು.

ವಿಶ್ವಕುಮಾರ್​, ಉಮೇಶ್​, ರೂಪ್​ಲಾಲ್​, ದಣಮೂರ್ತಿ, ಗಣೇಶ್​, ನಾಗರಾಜು.ಜಿ.ಸಿ., ಸುಲ್ತಾನ್​ ಬಾಬಾ, ಡಾ. ಮಲ್ಲಿನಾಥ್​, ಡಾ.ಲೋಕೇಶ್​, ಚಿದಾನಂದ, ರುದ್ರಾರಾಧ್ಯ, ರಮೇಶ್​, ಅಶ್ವಥ್​, ನರಸಿಂಹಮೂರ್ತಿ ಇತರರು ಇದ್ದರು.

ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ಶಿಬಿರದಲ್ಲಿ ಸುಮಾರು 142 ಜನರು ಉಚಿತವಾಗಿ ತಪಾಸಣೆಗೆ ಒಳಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net