ಹೆಣ್ಣು ಸುಶಿಕ್ಷಿತಳಾದರೆ ಸಮಾಜವೂ ಸುರಕ್ಷೆ

18 ckm 2
ಚಿಕ್ಕಮಗಳೂರಿನ ವಿಜಯಪುರ ಬಡಾವಣೆಯ ಶರಣೆ ಅಕ್ಕ ನಾಗಲಾಂಬಿಕೆ ಗುಂಪು ಶ್ರೀರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸೀಗೆಹುಣ್ಣಿಮೆ ಕಾರ್ಯಕ್ರಮವನ್ನು ಸಾಯಿಏಂಜೆಲ್ಸ್ ಪ್ರೌಢಶಾಲೆ ಶಿಕ್ಷಕಿ ನೇತ್ರಾವತಿ ಮಹೇಶ್ ಉದ್ಘಾಟಿಸಿದರು. ಯಮುನಾ ಸಿ.ಶೆಟ್ಟಿ, ಪಾರ್ವತಿ ಬಸವರಾಜು, ಮಂಜುಳಾ ಉದಯ್, ವನಜಾಕ್ಷಿ ಮೋಕ್ಷನಾತ್, ಆಶಾ ಮಲ್ಲೇಶ್, ಸುಮಿತ್ರಾ ಶಾಸ್ತಿç, ಶೈಲಜಾ ಬಸವರಾಜ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಶಿಕ್ಷಣದ ಜೊತಗೆ ಸಂಸ್ಕೃತಿ ಸಂಸಾರವೂ ಸಾಧನೆಗೆ ಸಹಕಾರಿ. ಸಾಧನೆಯ ಹಾದಿಯಲ್ಲಿ ಹೆಣ್ಣಿನ ಪಾತ್ರ ಮಹತ್ವವಾದದ್ದು ಎಂದು ಸಾಯಿಏಂಜೆಲ್ಸ್ ಪ್ರೌಢಶಾಲೆ ಶಿಕ್ಷಕಿ ನೇತ್ರಾವತಿ ಮಹೇಶ್ ಅಭಿಪ್ರಾಯಪಟ್ಟರು.

ಅಕ್ಕಮಹಾದೇವಿ ಮಹಿಳಾ ಸಂಘದ ವಿಜಯಪುರ ಬಡಾವಣೆಯ ಶರಣೆ ಅಕ್ಕ ನಾಗಲಾಂಬಿಕೆ ಗುಂಪು ಶ್ರೀರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸೀಗೆಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ. ಇಂದು ಪ್ರತಿಯೊಬ್ಬ ಹೆಣ್ಣುಮಕ್ಕಳು ಸುಶಿಕ್ಷಿತಳಾಗಿದ್ದಾಳೆ. ಕುಟುಂಬದಲ್ಲಿ ತಂದೆ-ತಾಯಿಗಳೆ ಆಧಾರ. ಸಂಸ್ಕೃತಿ ಸಂಸ್ಕಾರ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೆ ಹೇಳಿಕೊಟ್ಟಾಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು.
ದಸರಾ ಹಬ್ಬದ ಹತ್ತು ದಿನವೂ ಶಕ್ತಿದೇವತೆಯಾದ ಶ್ರೀದುರ್ಗೆಯನ್ನು ಹತ್ತು ಅವತಾರಗಳಲ್ಲಿ ಆರಾಧಿಸುತ್ತಾರೆ. ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆಯ ಪ್ರತೀಕವಾದ ದಸರಾ ಹಬ್ಬವನ್ನು ಕಳೆದ ವಾರ ಆಚರಿಸಿz್ದೆÃವೆ. ಅಕ್ಕಮಹಾದೇವಿ ಸಂಘದ ಎಲ್ಲ ಶರಣೆಯರು ಒಂದಿಲ್ಲೊAದು ಕ್ಷೇತ್ರದಲ್ಲಿ ಸಮಾಜದ ಶಕ್ತಿದೇವತೆಗಳು ಎಂದರು.
೧೨ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಹೆಣ್ಣಿಗೆ ಮೀಸಲಾತಿ ಮತ್ತು ಪ್ರಾಮುಖ್ಯತೆಯನ್ನು ಅಂದೇ ನೀಡಲಾಗಿತ್ತು. ಬಸವಣ್ಣ, ಅಲ್ಲಮಪ್ರಭು ಮೊದಲ ವಚನಗಾರ್ತಿ ಅಕ್ಕಮಹಾದೇವಿಯನ್ನು ಅಂದೆ ಗೌರವಾದರಗಳಿಂದ ಬಿಂಬಿಸಿದ್ದರು. ಶರಣೆಯರು ವಚನಗಳ ಮೂಲಕ ಸಮಾಜದ ಅಂಕುಡೊAಕುಗಳನ್ನು ತಿದ್ದುವಂತಹ ಕಾರ್ಯ ಆಗಲೇ ನಡೆದಿತ್ತು. ಯಾವುದೇ ಕ್ಷೇತ್ರದಲ್ಲಿ ಮಹಿಳೆ ಮುಂದೆಬರಲು ಸಮಾಜದ ಪ್ರೋತ್ಸಾಹದ ಜೊತೆಗೆ ಕುಟುಂಬದ ಸಹಕಾರ ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾ ಸಿ.ಶೆಟ್ಟಿ, ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಗೌರಮ್ಮ ಬಸವೇಗೌಡ ಅವರು ಹಗಲುರಾತ್ರಿ ಎನ್ನದೆ ಮನೆಮನೆಗೂ ಹೋಗಿ ಮಹಿಳೆಯರನ್ನು ಒಂದೂಗೂಡಿಸುವ ಕೆಲಸ ಮಾಡಿ ಅಕ್ಕಮಹಾದೇವಿ ಮಹಿಳಾ ಸಂಘ ಸ್ಥಾಪಿಸಿದರು. ಕಳೆದ ೧೫ವರ್ಷಗಳಿಂದ ಎಲ್ಲರ ಸಹಕಾರದಿಂದ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿದೆ. ಮುಂದಿನ ಡಿಸೆಂಬರ್ ತಿಂಗಳು ಕಾರ್ಯಕಾರಿ ಸಮಿತಿಯ ಚುನಾವಣೆ ನಡೆಯಲಿದ್ದು ೧೧ ಗುಂಪಿನ ಎಲ್ಲ ಸದಸ್ಯರು ಸಹಕರಿಸಬೇಕು ಎಂದು ಕೋರಿದÀರು.
ಸಂಘದ ಮುಖಂಡೆ ಪಾರ್ವತಿ ಬಸವರಾಜು ಮಾತನಾಡಿ, ಕಳೆದ ಮೂರು ವರ್ಷದ ಸೇವಾ ಕಾರ್ಯವು ಸಮಾಧಾನ ತಂದಿದೆ. ನಮ್ಮ ಗುಂಪಿನ ಎಲ್ಲ ಸದಸ್ಯರು ಅತ್ಯುತ್ತಮವಾದ ಸಹಕಾರ ನೀಡಿದ್ದು, ಮುಂದೆಯೂ ಸಹ ಇದೇ ರೀತಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳಿಗೆ ಸಹಕರಿಸಬೇಕು ಎಂದು ಹೇಳಿದರು.
ಸದಸ್ಯರಾದ ಮಂಜುಳಾ ಉದಯ್, ವನಜಾಕ್ಷಿ ಮೋಕ್ಷನಾತ್, ಆಶಾ ಮಲ್ಲೇಶ್, ಸುಮಿತ್ರಾ ಶಾಸ್ತಿç, ಶೈಲಜಾ ಬಸವರಾಜ್, ಅನುರಾಧ ರೇಣುಕ, ಶ್ಯಾಮಲಾ ರಮೇಶ್, ರೇಣುಕಾ ಕುಮಾರ್, ಗಾಯತ್ರಿ, ವೀಣಾ ರುದ್ರೇಶ್, ಪ್ರೇಮಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net