ರೈತ ಚೆನ್ನಾಗಿದ್ದರೆ ಎಲ್ಲರಿಗೂ ನೆಮ್ಮದಿ

21blh3 krishi mela
Published on

ಬೈಲಹೊಂಗಲ: ರೈತ ಮತ್ತು ಜಾನುವಾರು ವಿಚಾರ ಸಂಕಿರಣ ಪ್ರಶಂಸನೀಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಿವತ್ತ ಉಪಕುಲಪತಿ ಡಾ.ಶಿವಾನಂದ ಹೊಸಮನಿ ಹೇಳಿದರು.

ಪಟ್ಟಣದ ಎಪಿಎಂಸಿಯಲ್ಲಿ ಮರಡಿಬಸವೇಶ್ವರ ಜಾತ್ರೆ ನಿಮಿತ್ತ ಬೃಹತ್​ ಕಷಿಮೇಳ, ಜಾನುವಾರು ಪ್ರದರ್ಶನದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ನಾಡಿನಲ್ಲಿ ರೆತ ಉತ್ತಮ ಬೆಳೆ ಬೆಳೆದು ಚೆನ್ನಾಗಿದ್ದರೆ, ಎಲ್ಲರಿಗೂ ಅನ್ನ ಸಿಗಲಿದೆ ಎಂದರು. ಕಷಿಮೇಳ ಸಂಟಕ ಬಿ.ಬಿ.ಗಣಾಚಾರಿ ಮಾತನಾಡಿ, ರೆತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಹತ್ತು ಉಚಿತ ಮದುವೆ ಮಾಡಿಸುವ ಭರವಸೆ ನೀಡಿದರು.

ಸಾವಯವ ಕಷಿ ಸಂತೆ ಸಂಯೋಜಕ ವಿಜಯ ಪತ್ತಾರ, ವಿಜಯಪುರದ ಕಷಿ ತ ಪ್ರಭು ಸ್ವದೇಶಿ, ಕಷಿ ತ ಜಗದೀಶ ಹಿರೇಮಠ, ಸೌಮ್ಯ ಹಿರೇಮಠ, ಮತ್ತಿಕೊಪ್ಪ ವಿಜ್ಞಾನ ಕೇಂದ್ರದ ಕಷಿ ವಿಜ್ಞಾನಿ ಎಸ್​.ಎಸ್​.ವಾರದ ಮಾತನಾಡಿದರು. ಪ್ರಾಂಶುಪಾಲ ಮುದಸ್ಸರ್​ ತಿಗಡಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಶಂಕರ ಮಾಡಲಗಿ, ಕಾಶೀನಾಥ ಬಿರಾದಾರ, ಬಸವರಾಜ ತಿಗಡಿ, ಮಹಾಂತೇಶ ಜಿಗಜಿನ್ನಿ, ಸಂಗಮೇಶ ಸವದತ್ತಿಮಠ, ಎಪಿಎಂಸಿ ಕಾರ್ಯದರ್ಶಿ ಎಸ್​.ಎಸ್​. ಅರಳಿಕಟ್ಟಿ, ಸಹಾಯಕ ಕಷಿ ನಿರ್ದೇಶಕ ಬಸವರಾಜ ದಳವಾಯಿ, ಆನಂದ ಬಡಿಗೇರ, ರುದ್ರಪ್ಪ ಹೊಸಮನಿ, ಬಸವರಾಜ ಭರಮಣ್ಣವರ, ಬಾಬುಸಾಬ ಸುತಗಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net