

ಆಳಂದ: ನಿಸರ್ಗದ ಮುನಿಸಿನಿಂದಾಗಿ ಮಳೆ ಬಾರದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅನ್ನದಾತ ಖುಷಿಯಾಗಿದ್ದಾಗ ಮಾತ್ರ ದೇಶ ಸಮೃದ್ಧಿಯಾಗಿರಲು ಸಾಧ್ಯ ಎಂದು ಜಿಡಗಾ-ಮುಗಳಖೋಡ ಮಠದ ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.
ಜಿಡಗಾ ನವಕಲ್ಯಾಣ ಮಠದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ 39ನೇ ಗುರುವಂದನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಧರ್ಮ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಗುರುವಿನ ಪಾತ್ರ ಪ್ರಮುಖವಾಗಿದೆ. ಶ್ರೀ ಕೃಷ್ಣ ಪರಮಾತ್ಮನ ಪಾದದಲ್ಲಿ ಪದ್ಮ ಇದ್ದಿದ್ದು ಕೇಳಿz್ದೆÃವೆ, ಆದರೆ 21ನೇ ಶತಮಾನದ ಶಿವನ ತದ್ರೂಪಿ ಶ್ರೀ ಸಿದ್ಧರಾಮ ಶಿವಯೋಗಿಗಳ ಪಾದದಲ್ಲಿ ಪದ್ಮ ಇದ್ದದ್ದನ್ನು ನಾವೆಲ್ಲರ ಕಂಡಿz್ದÉÃವೆ. ಇಂತಹ ಮಹಾನ್ ಗುರುವಿನ ಆಸ್ಥಾನದಲ್ಲಿ ನಡೆಯುವ ಗುರುವಂದನಾ ಕಾರ್ಯಕ್ರಮದಲ್ಲಿ ಸೇರಿರುವ ಭಕ್ತರು ಮಹಾ ಪುಣ್ಯವಂತರು ಎಂದರು.
ಯಾವುದೇ ಜಾತಿ ಬೇಧ, ಮೇಲು- ಕೀಳುಗಳೆಂಬುದು ಜಿಡಗಾ ಮಠದಲ್ಲಿಲ್ಲ. ನಮ್ಮದು ಶ್ರೇಷ್ಠ ಗುರುಪರಂಪರೆಯಾಗಿದೆ. ಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತರ ಇಷ್ಟಾರ್ಥಗಳನ್ನು ಗುರುಗಳು ಈಡೇರಿಸುತ್ತಿದ್ದಾರೆ. ಶ್ರೀ ಸಿದ್ಧರಾಮ ಶಿವಯೋಗಿಗಳ ಆಶಯದಂತೆ ಮಠದಲ್ಲಿ ಅನ್ನ ದಾಸೋಹ, ಜ್ಞಾನ ದಾಸೋಹ ನಡೆಯುತ್ತಿದೆ. ಕೆರೆ ನಿರ್ಮಾಣ, ಗುಣಮಟ್ಟದ ವಸತಿ ಶಾಲೆ ನಿರ್ಮಾಣದ ಸಂಕಲ್ಪ ಮಾಡಲಾಗಿದೆ. ಶ್ರೀಮಠದಿಂದ ನಿರಂತರ ಸಮಾಜಮುಖಿ ಹಾಗೂ ಧಾರ್ಮಿಕ ಕಾರ್ಯಗಳು ಜರುಗಲಿವೆ ಎಂದು ಹೇಳಿದರು.
ಚಿನ್ಮಯಗಿರಿಯ ಶ್ರೀ ವೀರಮಹಾಂತ ಸ್ವಾಮೀಜಿ, ಮಾದನಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಪಡಸಾವಳಗಿಯ ಶ್ರೀ ಡಾ.ಶಂಭುಲಿAಗ ಶಿವಾಚಾರ್ಯರು, ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಬಿ.ಆರ್.ಪಾಟೀಲ್, ಅಲ್ಲಮಪ್ರಭು ಪಾಟೀಲ್ ಮಾತನಾಡಿದರು.
ಯುನೈಟೆಡ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಕ್ರಂ ಸಿದ್ದಾರೆಡ್ಡಿ, ಪ್ರಮುಖರಾದ ಸಿದ್ದಲಿಂಗ ರೆಡ್ಡಿ, ಮ್ಲಲಿಕಾರ್ಜುನ ರೆಡ್ಡಿ, ಹರ್ಷಾನಂದ ಗುತ್ತೇದಾರ್, ಶಂಕರರಾವ ದೇಶಮುಖ, ಮುರಳೀಧರ, ಡಾ.ಸಗ್ರಾಮ ಬಿರಾದಾರ ಇತರರಿದ್ದರು. ಈಜು ಸ್ಪರ್ಧೆಯಲ್ಲಿ ರಾಷ್ಟç ಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.