ಪರಿಸರ ಉಳಿದರೆ ನಮ್ಮ ಉಳಿವು

14Athni3
Published on

ಅಥಣಿ: ಪರಿಸರ ಉಳಿದರೆ ನಮ್ಮ ಉಳಿವು, ಉತ್ತಮ ಆಮ್ಲಜನಕ ಪಡೆಯಲು ಗಿಡಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಅಭಿಯಾನ ಜನಜಾಗೃತಿ ಹೆಚ್ಚಾಗಬೇಕು ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯ ತೇರದಾಳ ತೋಟದಲ್ಲಿ ಶನಿವಾರ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಪರಿಸರ ನಾಶವಾಗುತ್ತಿರುವುದು ಕಳವಳಕಾರಿ ಸಂಗತಿ. ಹೀಗಾಗಿ ಅವುಗಳ ಕುರಿತು ಜನಜಾಗೃತಿ ಮೂಡಿಸಿ ಪರಿಸರ ಸಂರಕ್ಷಿಸಿ, ಪರಿಸರ ಬೆಳೆಸಲು ಮುಂದಾಗೋಣ ಎಂದರು.

ಹಿರಿಯ ವೈದ್ಯ ಡಾ.ಪ್ರಮೋದ ಮಿರಜ ಮಾತನಾಡಿ, ಇಂದು ನಾವು ಪರಿಸರ ರಕ್ಷಣೆ ಮಾಡದಿದ್ದರೆ, ಮುಂಬರುವ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ರಸ್ತೆ ಅಗಲೀಕರಣದಿಂದ ಸಾಕಷ್ಟು ಪರಿಸರ ನಾಶವಾಗುತ್ತದೆ. ಆದ್ದರಿಂದ ಹೆಚ್ಚು ಗಿಡಮರ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಅರುಣ ಸೌದಾಗರ, ಹಿರಿಯ ಸದಸ್ಯ ಅನಿಲ ದೇಶಪಾಂಡೆ, ಜ್ಯೋತೆಪ್ಪ ತೇರದಾಳ, ಮಲ್ಲು ಬಳೊಳ್ಳಿ, ಸುಜಾತಾ ಸಿಂಧೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net