

ತರೀಕೆರೆ: ಪರಿಸರ ಉಳಿಸದಿದ್ದರೆ ನಾಡಿಗೆ ಗಂಡಾಂತರ ನಿಶ್ಚಿತ ಎಂದು ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಹೇಳಿದರು.
ತಾಲೂಕಿನ ಕಲ್ಲತ್ತಿಪುರ ಗ್ರಾಮದ ಗಂಧದ ಗುಡಿ-ಭಾಗ 6ರಲ್ಲಿ ಯಶಸ್ವಿ ಚಾರಿಟಬಲ್ ಟ್ರಸ್ಟ್‌ನಿಂದ ವಿಶ್ವ ಅರಣ್ಯ ದಿನಾಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಂಧ ಮತ್ತು ಮೆಕಡೋಮಿಯ ಸಸಿ ನೆಟ್ಟು ಮಾತನಾಡಿ, ಪರಿಸರ ನಾಶ ಮತ್ತು ಜಾಗತಿಕ ತಾಪಮಾನದಿಂದ ಜಗತ್ತು ತಲ್ಲಣಗೊಂಡಿದೆ. ಪರಿಸರ ರಕ್ಷಣೆ ಮಾಡುವುದು ಗಂಧದ ಗುಡಿ ಸ್ಥಾಪನೆಯ ಉದ್ದೇಶವಾಗಿದೆ ಎಂದು ಹೇಳಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಮಾತನಾಡಿ, ಪರಿಸರ ಕಾಳಜಿ ಪ್ರತಿಯೊಬ್ಬರಿಗೂ ಇರಬೇಕು. ಎಲ್ಲರೂ ಮನೆ ಮುಂದೆ ಗಿಡ ಬೆಳೆಸುವ ಸಂಕಲ್ಪ ಮಾಡಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷರಾದ ಟಿ.ಆರ್.ನಾಗರಾಜ್, ಗಿರಿಜಮ್ಮ, ಟಿ.ಎಲ್.ಅಶ್ವಿನಿ, ಗ್ರಾಪಂ ಉಪಾಧ್ಯಕ್ಷ ಆರ‌್ಮುಗ, ರೈತ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಯ್ಯ, ಅನಿವಾಸಿ ಭಾರತೀಯ ಡೆವಿಡ್ ಬರ್ಡ್ ಮತ್ತಿತರರಿದ್ದರು.