

ಹುಬ್ಬಳ್ಳಿ: ನಗರದ 53ನೇ ವಾರ್ಡ್‌ನ ಅಭಿನವನಗರದ ಶಾಂತ ಶ್ರೀಶಾಂತ ಮಠ ಆವರಣದಲ್ಲಿ ಭಾನುವಾರ ಹು-ಧಾ ಬಿಜೆಪಿ ಸೆಂಟ್ರಲ್ ಕ್ಷೇತ್ರದ ವತಿಯಿಂದ ಸ್ವಚ್ಛತಾ ಅಭಿಯಾನ ಏರ್ಪಡಿಸಲಾಗಿತ್ತು.
ಅಭಿಯಾನಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿ ಮಾತನಾಡಿ, ಪ್ರತಿ ಭಾನುವಾರ ನಮ್ಮ ಕ್ಷೇತ್ರದಲ್ಲಿ ಅಭಿಯಾನ ನಡೆಸುತ್ತಿದ್ದೇವೆ. ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿ ಇಡುವುದರಿಂದ ಯಾವುದೇ ರೋಗ-ರುಜಿನಗಳು ನಮ್ಮನ್ನು ಬಾಧಿಸುವುದಿಲ್ಲ ಎಂದರು.
ಮಣಕವಾಡ ಮಠದ ಶ್ರೀ ಶಿವಪುತ್ರ ಸ್ವಾಮೀಜಿ ಸೇರಿದಂತೆ ಬಹಳಷ್ಟು ಸ್ವಾಮೀಜಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಪ್ರಮುಖರಾದ ಕೃಷ್ಣ ಗಂಡಗಾಳೇಕರ, ಟಿ.ಎನ್. ಶಿವನಗೌಡರ, ಹರೀಶ ಜಂಗಲಿ, ಕಿಶನ ಬಿಲಾನಾ, ಜಿಲ್ಲಾ ವಕ್ತಾರ ರವಿ ನಾಯಕ, ಸಂಗೀತಾ ಬದ್ದಿ, ಅಕ್ಕಮಹಾದೇವಿ ಬಾಗೇವಾಡಿ, ಸಿದ್ದೇಶ ಕಬಾಡದ, ಡಿ. ರಘು, ಮೋಹನ ಬುರುಡೆ, ದೀಪಕ ಜಿತೂರಿ, ಸುಭಾಷ ಅಕ್ಕಲಕೋಟೆ ಇತರರು ಇದ್ದರು.