ಬೇಡಿಕೆ ಈಡೇರಿಸದಿದ್ದರೆ ರೈತರಿಂದ ಮತ್ತೆ ಹೋರಾಟ

12 LXR 2
Published on

ಲಕ್ಷ್ಮೇಶ್ವರ: ಕಳೆದ ತಿಂಗಳು ಪಟ್ಟಣದಲ್ಲಿ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಮನವಿ ಸ್ವೀಕರಿಸಿದ್ದ ಸಚಿವ ಎಚ್.ಕೆ. ಪಾಟೀಲ ಅವರು 3 ಬೇಡಿಕೆಗಳನ್ನು ಈಡೇರಿಸಿದ್ದಾರೆ. ಉಳಿದ ಬೇಡಿಕೆಗಳನ್ನು ಈಡೇರಿಸದಿದ್ದರೆ ರೈತರು ಮತ್ತೆ ಹೋರಾಟಕ್ಕೆ ಸಿದ್ಧರಾಗುತ್ತೇವೆ ಎಂದು ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಬೆಳೆವಿಮೆ ಘೋಷಣೆ ಮಾಡಿದ್ದು, ಅದು ಹೆಸರು ಬೆಳೆಗೆ ಮಾತ್ರ ಘೋಷಣೆಯಾಗಿದೆ. ಉಳಿದ ಬೆಳೆಗಳಿಗೂ ವಿಮೆ ಅನ್ವಯಿಸಬೇಕು. ಲಕ್ಷ್ಮೇಶ್ವರ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿ, ಕಾಮಗಾರಿ ಪ್ರಾರಂಭಿಸಬೇಕು. ಬೆಳೆಸಾಲ ಸಂಪೂರ್ಣ ಮನ್ನಾ, ಬ್ಯಾಂಕುಗಳು ನೀಡುತ್ತಿರುವ ಕಿರುಕುಳ ತಪ್ಪಿಸಬೇಕು. ಕಿಸಾನ್ ಸಮ್ಮಾನ ಯೋಜನೆ ರಾಜ್ಯದಲ್ಲಿ ಜಾರಿಗೆ ತರಬೇಕು ಎಂದು ಮನವಿ ಮಾಡಿದರು. ಕೃಷಿಕ ಸಮಾಜದ ಚನ್ನಪ್ಪ ಷಣ್ಮುಖಿ ಮಾತನಾಡಿದರು. ರೈತ ಮುಖಂಡರಾದ ಟಾಕಪ್ಪ ಸಾತಪೂತೆ, ಶಿವಾನಂದ ಲಿಂಗಶೆಟ್ಟಿ, ಆನಂದ ಅಮರಶೆಟ್ಟಿ, ಸಂಗಮೇಶ ಮಡಿವಾಳರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net