ಬೇಡಿಕೆ ಈಡೇರಿಸದಿದ್ದರೆ ತರಗತಿ ಬಹಿಷ್ಕರಿಸಿ ಹೋರಾಟ

001
Published on

ರಾಯಚೂರು: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸದಿದ್ದರೆ ನವೆಂಬರ್ ಎರಡನೇ ವಾರದಲ್ಲಿ ತರಗತಿ ಬಹಿಷ್ಕರಿಸಿ ಹೋರಾಟ ನಡೆಸಲಾಗುವುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಕಲ್ಮನಿ ಹೇಳಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರಾಜ್ಯದಲ್ಲಿನ 430ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲಿ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ದಶಕಗಳ ಮೇಲ್ಪಟ್ಟು ಕೆಲಸ ಮಾಡುತ್ತಿದ್ದು, ಕಾರ್ಯಭಾರ ಇಲ್ಲ ಎನ್ನುವ ಕಾರಣಕ್ಕೆ 15 ವರ್ಷ ಸೇವೆ ಸಲ್ಲಿಸಿದವರನ್ನು ತೆಗೆದು ಹಾಕುವ ಮೂಲಕ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದರು.
ಕರ್ತವ್ಯಕ್ಕೆ ನೇಮಕಾತಿಗೊಂಡಿದ್ದರು ಉನ್ನತ ಶಿಕ್ಷಣ ಇಲಾಖೆ ಅಕಾರಿಗಳ ವೌಖಿಕ ಆದೇಶದ ಮೇರೆಗೆ ಅತಿಥಿ ಉಪನ್ಯಾಸಕರಿಗೆ ಹಾಜರಾತಿ ನೀಡುತ್ತಿಲ್ಲ. ಬೋಧನೆ, ನ್ಯಾಕ್ ಸೇರಿದಂತೆ ಎಲ್ಲ ಕೆಲಸಗಳಲ್ಲಿಯೂ ಅತಿಥಿ ಉಪನ್ಯಾಸಕರನ್ನು ಪ್ರಾಚಾರ್ಯರು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದರೂ ಸಮರ್ಪಕ ವೇತನ ನೀಡುತ್ತಿಲ್ಲ.
ಬಿಜೆಪಿ ಸರ್ಕಾರದ ಅವಯಲ್ಲಿ ಹೋರಾಟದ ಲವಾಗಿ ವೇತನವನ್ನು ಹೆಚ್ಚಳ ಮಾಡಲಾಗಿದ್ದರೂ ಕಾಯಂಗೊಳಿಸುವ ಭರವಸೆ ಈಡೇರಿಸಿಲ್ಲ. ಪ್ರತಿಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಸದನದಲ್ಲಿ ಅತಿಥಿ ಉಪನ್ಯಾಸಕರ ಪರವಾಗಿ ಧ್ವನಿಯೆತ್ತಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದು ಹಿಂದೆ ನೀಡಿದ ಹಾಗೂ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಲು ಮುಂದಾಗಬೇಕಾಗಿದೆ.
ಹೊರಗುಳಿದ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತ ಹಾಜರಾತಿ ನೀಡಬೇಕು. ಉನ್ನತ ಶಿಕ್ಷಣ ಇಲಾಖೆ ಅಕಾರಿಗಳು ಅವೈಜ್ಞಾನಿಕ ವೌಖಿಕ ಆದೇಶ ನೀಡುವುದನ್ನು ನಿಲ್ಲಿಸಬೇಕು. ಕಳೆದ ಸರ್ಕಾರ 10 ತಿಂಗಳ ವೇತನ ನೀಡುತ್ತಿದ್ದು, ಈಗ ಅದನ್ನು ಐದಾರು ತಿಂಗಳಿಗೆ ಬದಲಿಸಿರುವುದನ್ನು ಕೈಬಿಡಬೇಕು.
ಅತಿಥಿ ಉಪನ್ಯಾಸಕಿಯರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ಅತಿಥಿ ಉಪನ್ಯಾಸಕ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಉದ್ಯೋಗ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಡಾ.ಹನುಮಂತಗೌಡ ಕಲ್ಮನಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಡಾ.ಶ್ರೀನಿವಾಸ ಹೊಸಪೇಟೆ, ಗೌರವಾಧ್ಯಕ್ಷ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ, ಪದಾಕಾರಿಗಳಾದ ಡಾ.ಪೀಟರ್ ವಿನೋದಚಂದ, ಡಾ.ಹನುಮಂತ ಕುರ್ಡಿ, ಈರಣ್ಣ ಗಟ್ಟುಬಿಚ್ಚಾಲಿ, ಶರಣಬಸವ ಮದ್ಲಾಪುರ, ಸುರೇಶ ಬಳಗಾನೂರು, ಶಶಿಧರ ಅಕ್ಕರಕಿ, ವೀರೇಶ ಳಾರಿಮಠ, ಡಾ.ವೀರೇಶ, ಚೋಳರಾಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net