ಅನ್ನದಾತ ಬೆಳೆದರೆ ದೇಶದ ಅಭಿವೃದ್ಧಿ

4
ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಐಶರ್ ಟ್ರ್ಯಾಕ್ಟರ್ ಹೊಸ ಮಾಡಲ್‌ಗಳ ಅನಾವರಣ ಹಾಗೂ ಐಶರ್ ಟ್ರ್ಯಾಕ್ಟರ್ ವಿತರಣಾ ಸಮಾರಂಭದಲ್ಲಿ ರೈತರನ್ನು ಸತ್ಕರಿಸಲಾಯಿತು. ಆಸೀಷ್ ಗುಪ್ತಾ, ಬಿ.ಕೆ.ಪುನೀತ, ಪವನಕುಮಾರ ಟುಟೇಜಾ ಇತರರಿದ್ದರು.
Published on

ರಾಯಬಾಗ: ಜಗತ್ತಿಗೆ ಅನ್ನ ನೀಡುವ ಅನ್ನದಾತನ ಅಭಿವೃದ್ಧಿ ದೇಶದ ಅಭಿವೃದ್ಧಿಯಾಗಿದೆ ಎಂದು ಅಥಣಿ ನದಿಇಂಗಳಗಾಂವ ಶಿವಯೋಗೀಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಮಹಾವೀರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಐಶರ್ ಟ್ರ್ಯಾಕ್ಟರ್ ಹೊಸ ಮಾಡಲ್‌ಗಳ ಅನಾವರಣ ಹಾಗೂ ಐಶರ್ ಟ್ರ್ಯಾಕ್ಟರ್ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಐಶರ್ ಟ್ರ್ಯಾಕ್ಟರ್‌ನಿಂದ ರೈತನ ಬದುಕು ಸುಂದರವಾಗಲಿದೆ. ರೈತರು ಕೃಷಿಯಲ್ಲಿ ಐಶರ್ ಟ್ರಾೃಕ್ಟರ್ ಅಳವಡಿಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ಐಶರ್ ಟ್ರ್ಯಾಕ್ಟರ್‌ನ ಹೊಸ ಮಾಡೆಲ್‌ಗಳ ಮೆರವಣಿಗೆ ಜರುಗಿತು. ಬಳಿಕ ಗಣ್ಯರು ಅದ್ದೂರಿಯಾಗಿ ಸ್ವಾಗತಿಸಿ, ಅನಾವಣಗೊಳಿಸಿದರು. ರೈತರನ್ನು ಸತ್ಕರಿಸಲಾಯಿತು.

ಭೂಪಾಲದ ಎಕ್ಸಿಕ್ಯಿಟಿವ್ ವೈಸ್‌ಪ್ರೆಸಿಡೆಂಟ್ ಸೇಲ್ಸ್ ಮತ್ತು ಮಾರ್ಕೆಟಿಂಗ್‌ನ ಆಸೀಷ್ ಗುಪ್ತಾ, ಅಸೋಸಿಯೇಟ್ ವೈಸ್‌ಫ್ರೆಸಿಡೆಂಟ್ ಸೋಮಶೇಖರ, ಹೆಡ್‌ಮಾರ್ಕೆಟಿಂಗ್ ಬಿ.ಕೆ.ಪುನೀತ, ಕುರಂಬಯ್ಯ, ಹೆಡ್ ಪ್ರೊಡೆಕ್ಟ್ ಮ್ಯಾನೇಜಮೆಂಟ್ ಗ್ರೂಫ್ ಪವನಕುಮಾರ ಟುಟೇಜಾ, ಪ್ರೊಡೆಕ್ಟ್ ಮಾರ್ಕೇಟಿಂಗ್ ಆನಂದ ಪಾರೆ, ಬೆಂಗಳೂರು ಡೆಪ್ಯೂಟಿ ಜನರಲ್ ಮ್ಯಾನೇಜರ್ ವಿಶ್ವೇಶ ಎಂ.ಎಸ್., ಸಿನಿಯರ್ ಮ್ಯಾನೇಜರ್ ಜಿ.ಮೂರ್ತಿ, ಸಿನಿಯರ್ ಮ್ಯಾನೇಜರ್ ಸರ್ವಿಸ್ ಪವನಕುಮಾರ ಉಪಾಧ್ಯೆ, ಹಿರೇಮಠ ಟ್ರ್ಯಾಕ್ಟರ್ಸ್‌ ಮಾಲೀಕ ರಾಜಶೇಖರ ಹಿರೇಮಠ, ಸಂಜಯ ಹಿರೇಮಠ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net