

ಬೆಂಗಳೂರು: ವಿದ್ಯಾರ್ಥಿಗಳು ಕೌಶಲವನ್ನು ಮೈಗೂಡಿಸಿಕೊಂಡರೆ ಉದ್ಯೋಗಾವಕಾಶಗಳು ಹೆಚ್ಚು ಸಿಗುತ್ತವೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯ ಡಾ.ಟಿ.ಜಿ. ಸೀತಾರಾಮ್ ಹೇಳಿದ್ದಾರೆ.
ಕೆಂಗೇರಿಯ ಎಸ್‌ಜೆಬಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 20 ನೇ ಪದವಿ ದಿನಾಚರಣೆ ಎಸ್‌ಜೆಬಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ (ಎಸ್‌ಜೆಬಿ ಎಸ್‌ಎಪಿ) ನ 7ನೇ ಪದವಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಲಿಕೆ ಎಂಬುದು ಒಂದು ನಿರಂತರ ಪ್ರಕ್ರಿಯೆ. ಕೌಶಲ್ಯ ಎಂಬುದು ಉದ್ಯೋಗಾವಕಾಶವನ್ನು ಕೊಡಿಸುವ ಕೀಲಿ ಕೈ ಇದ್ದಂತೆ. ವಿದ್ಯಾರ್ಥಿಗಳು ತಂತ್ರಜ್ಞಾನ ಮತ್ತು ಕೌಶಲ್ಯವನ್ನು ಮೈಗೂಡಿಸಿಕೊಂಡರೆ ಉದ್ಯೋಗ ಅವಕಾಶಗಳು ಹೆಚೆ್ಚೆೆಚ್ಚು ಸಿಗುತ್ತವೆ. ಕೌಶಲ್ಯವೇ ಕರೆನ್ಸಿ ಆಫ್ ಪ್ಯೂಚರ್. ಹೀಗಾಗಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಜ್ಞಾನದ ಜತೆ ಕೌಶಲ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಆದಿ ಚುಂಚುನಗಿರಿ ಮಠದ ಪೀಠಾಧಿಪತಿ ಹಾಗೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದ ಅವರಿಂದ ಪ್ರಭಾವಿತರಾದ ಖ್ಯಾತ ಉದ್ಯಮಿ ಜೆಮ್‌ಶೆಡ್ ಟಾಟಾ ಭಾರತದಲ್ಲಿ ಐಐಎಸ್‌ಸಿ ಸ್ಥಾಪಿಸಿದರು. ಆಗ ಭಾರತದಲ್ಲಿ ಇಂಜಿನಿಯರ್‌ಗಳ ಕೊರತೆ ಇತ್ತು. ಆದರೀಗ ಭಾರತವು ಪ್ರಪಂಚಕ್ಕೆ ಹೆಚ್ಚು ಇಂಜಿನಿಯರ್‌ಗಳನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳು ಕೇವಲ ಜ್ಞಾನವನ್ನು ಪಡೆದುಕೊಂಡರೆ ಸಾಲದು. ಅದರ ಜತೆ ಸಂಸ್ಕಾರವಂತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನವದೆಹಲಿಯ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್‌ನ ಡಾ.ಪ್ರತಾಪಸಿಂಗ್ ಕಾಕಾಸಾಹೇಬ್ ದೇಸಾಯಿ, ಎಥ್ನೋಟೆಕ್ ಅಕಾಡೆಮಿಕ್ ಸೊಲ್ಯೂಷನ್ಸ್ ಅಧ್ಯಕ್ಷ ಡಾ.ಕಿರಣ್ ರಾಜಣ್ಣ, ಚಾಂಪಿಯನ್ ಗ್ರೂಪ್ ಎಂ.ಡಿ ಹೇಮಾಮಣಿ, ಕಾಗ್ನಿಜೆಂಟ್ ಇಂಡಿಯಾ ಕ್ಯಾಂಪಸ್ ನೇಮಕಾತಿ ಮತ್ತು ಸಂಬಂಧಗಳ ಮುಖ್ಯಸ್ಥೆ ಅಶ್ವತಿ ವೇಣುಗೋಪಾಲ್, ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಇಸಿ ಸದಸ್ಯ ಆರ್. ವಿದ್ಯಾಧರ್ ಪಿ. ಒಡೆಯರ್, ಡಾ. ಕೆ ವಿ ಮಹೇಂದ್ರ ಪ್ರಶಾಂತ್ ಪ್ರಾಂಶುಪಾಲರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇಸಿಇ ವಿಭಾಗದ ಜಿ. ರೇಷ್ಮ , ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗದ ಎಲ್. ಮೋಹನ್ ಕುಮಾರ್ ತಲಾ 7 ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆದುಕೊಂಡರು. ಎಸ್‌ಜೆಬಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಭಾಗದಲ್ಲಿ 650 ವಿದ್ಯಾರ್ಥಿಗಳು ಪದವಿ ಪಡೆದುಕೊಂಡರು. ಎಸ್‌ಜೆಬಿ ಸ್ಕೂಲ್ ಆಫ್ ಆರ್ಕಿಟೆಕ್ಟರ್ ವಿಭಾಗದಲ್ಲಿ 120 ವಿದ್ಯಾರ್ಥಿಗಳು ಪದವಿ ಪಡೆದುಕೊಂಡರು.
ಇಂದು ಪದವಿ ಪಡೆದು ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಹೆತ್ತವರಿಗೆ ಮತ್ತು ವಿದ್ಯಾ ಸಂಸ್ಥೆಗಳಿಗೆ ಕೀರ್ತಿಯನ್ನು ತರಲಿ
-ಶ್ರೀ ಡಾ.ಪ್ರಕಾಶನಾಥ ಸ್ವಾಮೀಜಿ, ವ್ಯವಸ್ಥಾಪಕ ನಿರ್ದೇಶಕರು, ಬಿಜಿಎಸ್ ಮತ್ತು ಎಸ್‌ಜೆಬಿ ಸಮೂಹ ಸಂಸ್ಥೆ.