ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸಿದರೆ ಕ್ರಮ - ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಹೇಳಿಕೆ

jkd 8-4
ಜಮಖಂಡಿ ನಗರದ ಹನುಮಾನ ವೃತ್ತದಲ್ಲಿ ಶೀತಲ ನ್ಯಾಮಗೌಡ ಅಂಗಡಿ ಮುಂಭಾಗ ಇನ್ನರ್‌ವೀಲ್ ಸಂಸ್ಥೆ ಪದಾಧಿಕಾರಿಗಳು ಪ್ಲಾಸ್ಟಿಕ್ ಬಳಕೆ ನಿಷೇಧ ಜಾಗೃತಿ ಅಭಿಯಾನದ ಅಂಗವಾಗಿ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಿದರು. ಲಕ್ಷ್ಮೀ ಅಷ್ಟಗಿ, ರಶ್ಮಿ ದೇಸಾಯಿ, ಲತಾ ಪಾಟೀಲ, ಮೇಘಾ ಮಹಾಬಳಶೆಟ್ಟಿ ಇತರರಿದ್ದರು.
Published on

ಜಮಖಂಡಿ: ಪರಿಸರಕ್ಕೆ ಹಾನಿಯಾಗದಂತೆ ತಡೆಯಲು ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದು, ಎಲ್ಲ ವ್ಯಾಪಾರಸ್ಥರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಬಳಕೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಹೇಳಿದರು.

ನಗರದ ಹನುಮಾನ ವೃತ್ತದಲ್ಲಿರುವ ಹಣ್ಣಿನ ವ್ಯಾಪಾರಸ್ಥ ಶೀತಲ ನ್ಯಾಮಗೌಡ ಅವರ ಅಂಗಡಿಯಲ್ಲಿ ಇನ್ನರ್‌ವೀಲ್ ಸಂಸ್ಥೆ ಪದಾಧಿಕಾರಿಗಳು ಏರ್ಪಡಿಸಿದ ಪ್ಲಾಸ್ಟಿಕ್ ಬಳಕೆ ನಿಷೇಧ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಇನ್ನರ್‌ವೀಲ್ ಸಂಸ್ಥೆ ಕಾರ್ಯದರ್ಶಿ ರಶ್ಮಿ ದೇಸಾಯಿ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಜನರಲ್ಲಿ ಹೆಚ್ಚು ರೋಗಗಳು ಉಲ್ಬಣವಾಗುತ್ತಿವೆ. ಜಾನುವಾರು ಪಾಸ್ಟಿಕ್‌ಗಳನ್ನು ತಿಂದು ಸಾವನ್ನಪ್ಪುತ್ತಿವೆ. ರೋಟರಿ ಸಂಸ್ಥೆಯಿಂದ ಉಚಿತವಾಗಿ ಬಟ್ಟೆ ಬ್ಯಾಗ್‌ಗಳನ್ನು ಅಂಗಡಿ ವ್ಯಾಪಾರಸ್ಥರಿಗೆ ಉಚಿತವಾಗಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಚಾರ್ಟರ್ ಮೆಂಬರ್ ಲತಾ ಪಾಟೀಲ, ಸಂಸ್ಥೆ ಅಧ್ಯಕ್ಷೆ ಮೇಘಾ ಮಹಾಬಳಶೆಟ್ಟಿ, ಡಾ.ಪೂಜಾ ಪಡಸಾಲಿ, ಡಾ.ಅಶ್ವಿನಿ ಪೂಜಾರಿ, ಅರ್ಚನಾ ಕಾಖಂಡಕಿ, ಶೀಲಾ ಮುರುಗೋಡ, ಭಾಗ್ಯ ಕೋಟಿ, ಮಹಾನಂದಾ ಪಾಟೀಲ, ಯಶಸ್ವಿನಿ ಮಠ, ಗಿರಿಜಾ ಮೇತ್ರಿ, ರೇಣುಕಾ ತೇಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net