ಜನರ ಸಮಸ್ಯೆಗೆ ಸ್ಪಂದಿಸಿದರೆ ದೇಶ ರಾಮ ರಾಜ್ಯ

IMG_20240815_131823
Published on


ನುಗ್ಗೇಹಳ್ಳಿ : ಜನಪ್ರತಿನಿಧಿಗಳು, ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದರೆ ನಮ್ಮ ದೇಶ ರಾಮ ರಾಜ್ಯವಾಗುತ್ತದೆ ಎಂದು ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಎನ್.ಎಸ್.ಲಕ್ಷ್ಮಣ್ ತಿಳಿಸಿದರು.


ನುಗ್ಗೆಹಳ್ಳಿ ಗ್ರಾಮ ಪಂಚಾಯಿತಿಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಪಕ್ಷಭೇದ, ಜಾತಿಭೇದ ಮರೆತು ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಅಭಿವೃದ್ಧಿಗೆ ಮುಂದಾಗಬೇಕು. ಸ್ವಾಮಿ ವಿವೇಕಾನಂದರು ದೇಶದ ಸಮಸ್ತ ಜನರ ಒಳಿತಿಗೆ ಹೋರಾಡಿ ಎಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಜಾಗೃತಿ ಮೂಡಿಸಿದರು ಎಂದರು. ಪ್ರಭಾರ ಉಪ ತಹಸೀಲ್ದಾರ್ ಲೋಕೇಶ್ ಮಾತನಾಡಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಜಗದೀಶ್ ಅವರ ಪ್ರಾಮಾಣಿಕ ಸೇವೆ ಗುರುತಿಸಿ ಸದಸ್ಯರು ಅಭಿನಂದಿಸಿದರು.
ಪಿಡಿಒ ಶಿವರಾಂ, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಕುಮಾರ್, ಉದ್ಯಮಿ ಜಗದೀಶ್, ಮಾಜಿ ಅಧ್ಯಕ್ಷ ಎನ್.ಎನ್. ಮಂಜಪ್ಪ, ಕಾರ್ಯದರ್ಶಿ ಭವಾನಿ, ಲೆಕ್ಕಪತ್ರಗಾರ ರಾಜಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net