ಜನರ ಕೆಲಸ ಮಾಡದಿದ್ದರೆ ಜಾಗ ಖಾಲಿ ಮಾಡಿ

09 08 2025_BGR RURAL_PAGE_02
ಆನೇಕಲ್​ ಪುರಸಭೆಯಲ್ಲಿ ಶಾಸಕ ಬಿ.ಶಿವಣ್ಣ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು.ವಿಧಾನ ಪರಿಷತ್​ ಸದಸ್ಯ ಗೋಪಿನಾಥ ರೆಡ್ಡಿ, ಗ್ಯಾರಂಟಿ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಪುರುಷೋತ್ತಮರೆಡ್ಡಿ, ತಹಸೀಲ್ದಾರ್​ ಶಶಿಧರ್​ ಮಾಡಿಯಾಳ್​ ಇದ್ದರು.
Published on

ಆನೇಕಲ್​ : ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಸೇವೆಗೆ ಬಂದಿರುತ್ತೇವೆ. ಆದರೆ ಕೆಲವು ಅಧಿಕಾರಿಗಳು ಇತ್ತೀಚೆಗೆ ಜನರ ಸೇವೆ ಮರೆತಿರುವುದು ಗಮನಕ್ಕೆ ಬಂದಿದೆ, ಇದು ಮುಂದುವರಿದರೆ ಸಹಿಸುವುದಿಲ್ಲ ಶಾಸಕ ಬಿ.ಶಿವಣ್ಣ ಎಚ್ಚರಿಕೆ ನೀಡಿದರು. ಪುರಸಭೆಯಲ್ಲಿ ಗುರುವಾರ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜನಸ್ನೇಹಿ ಮತ್ತು ಜನಹಿತ ಕಾಪಾಡುವ ಅಧಿಕಾರಿಗಳು ತಾಲೂಕಿನಲ್ಲಿ ಇರಲಿ. ಇಲ್ಲವಾದಲ್ಲಿ ಇಲ್ಲಿಂದ ಜಾಗ ಖಾಲಿ ಮಾಡಿಕೊಂಡು ಹೋಗಲಿ ಎಂದು ಎಚ್ಚರಿಕೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಗ್ರಾಮ ಸಭೆಗಳಿಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ ಎನ್ನುವ ಆರೋಪ ದೊಡ್ಡಮಟ್ಟದಲ್ಲಿ ಕೇಳಿಬಂದಿದೆ. ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಜನರ ಸಮಸ್ಯೆಯನ್ನೇ ಆಲಿಸದೆ ಕಚೇರಿಯಲ್ಲಿ ಇದ್ದರೆ ಸರ್ಕಾರದ ಯೋಜನೆಗಳು ಜನರಿಗೆ ತಿಳಿಯುವುದು ಹೇಗೆ ಎಂದು ಪ್ರಶ್ನಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಾಲೂಕಿನ ವಸತಿ ನಿಲಯಗಳಿಗೆ ಆಗಾಗ ಭೇಟಿ ಕೊಡಬೇಕು, ವಸತಿ ನಿಲಯಗಳ ಆಹಾರದ ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.

ತಾಲೂಕಿನಲ್ಲಿ 10ನೇ ತರಗತಿ ಪರೀೆಯಲ್ಲಿ ಶೇ.100 ಫಲಿತಾಂಶದ ಸಾಧಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು, ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಗೃಹ ಸೇರಿ ಅವಶ್ಯಕತೆ ಇರುವ ಸೌಲಭ್ಯ ಕಲ್ಪಿಸಲು ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಕ್ರಿಯಾಯೋಜನೆ ರೂಪಿಸಬೇಕು ಎಂದು ಸೂಚಿಸಿದರು. ಆನೇಕಲ್​ ಮೂಲಕ ತಮಿಳುನಾಡಿನ ತಳಿ ಸಂಪರ್ಕ ಕಲ್ಪಿಸುವ ತಳಿರಸ್ತೆ ಕಾಮಗಾರಿಗೆ ವೇಗ ನೀಡಬೇಕು ಎಂದರು. ತಾಲೂಕು ಪಂಚಾಯಿತಿ ಇಒ ಬೈರಪ್ಪ, ವಿಶೇಷ ತಹಸಿಲ್ದಾರ್​ ಕರಿಯ ನಾಯಕ್​ ಇದ್ದರು.

ಶಾಸಕರ ಸೂಚನೆಗಳು : ತಾಲೂಕಿನ 512 ಅಂಗನವಾಡಿಗಳ ಈ ಪೈಕಿ 307 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದೆ. ಉಳಿದ ಅಂಗನವಾಡಿಗಳಿಗೂ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಬಳಸಬೇಕು. ಉತ್ತಮ ಮಳೆಯಾಗಿದ್ದು, ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ವೈದ್ಯಕಿಯ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರ್ಜಾಪುರದಲ್ಲಿ ಶ್ರೀ ಪಶು ವೈದ್ಯಕಿಯ ಆಸ್ಪತ್ರೆ ನಿರ್ಮಾಣ ಮಾಡುವುದು. ಶಾಲಾ ಕಾಲೇಜು ಮತ್ತು ಸರ್ಕಾರಿ ಜಾಗದಲ್ಲಿ ಗಿಡ ನೆಡುವುದು. ರಸ್ತೆಯ ಎರಡೂ ಬದಿ ಹಾಗೂ ರಸ್ತೆ ವಿಭಜಕಗಳಲ್ಲಿ ಗಿಡ ನೆಡುವುದು. 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕು ಪತ್ರ ನೀಡುವುದು. ಅರ್ಹರಿಗೆ ಪಿಂಚಣಿ ನೀಡುವುದು.

ಪ್ರತಿ ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿ ಇರಬೇಕು, ಪಡಿತರ ಪಡೆಯಲು ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವ ಪರಿಸ್ಥಿತಿ ನಿರ್ಮಾಣ ಆಗಬಾರದು.

ಅಂಬೇಡ್ಕರ್​ ಭವನಕ್ಕೆ ವಿಳಂಬಕ್ಕೆ ಆಕ್ರೋಶ : ಪಟ್ಟಣದಲ್ಲಿ 17 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಅಂಬೇಡ್ಕರ್​ ಭವನ ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು, ಹೆಚ್ಚುವರಿ ಅನುದಾನ ತಂದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರ್ನಿಲಕ್ಷ$್ಯವಹಿಸುತ್ತಿದ್ದು, ಅಂಬೇಡ್ಕರ್​ ಭವನ ಶ್ರೀ ಪೂರ್ಣಗೊಳಿಸಬೇಕು ಎಂದು ಶಾಸಕರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net