ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಕ್ರಮ

8RAM3
Published on

ರಾಮದುರ್ಗ: ಸರ್ಕಾರಿ ಆಸ್ಪತೆಗೆ ಹೆಚ್ಚಾಗಿ ಬಡ ರೋಗಿಗಳೇ ಬರುತ್ತಾರೆ. ವೈದ್ಯರು ಅವರನ್ನು ಸೌಜನ್ಯದಿಂದ ಉಪಚರಿಸಬೇಕು. ಆಗ ಜನರಿಗೆ ವೈದ್ಯರ ಬಗ್ಗೆ ಪೂಜ್ಯ ಭಾವನೆ ಬರಲು ಸಾಧ್ಯ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ಸರ್ಕಾರಿ ಸಮುದಾಯ ತಾಲೂಕು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ವೈದ್ಯರು ಹಾಗೂ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹಣ ಪಡೆದುಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಇದು ಬದಲಾಗಬೇಕು. ಇಲ್ಲದಿದ್ದರೆ ಅಂತಹವರ ಮೇಲೆ ಶಿಸ್ತು

ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ವಾತಂತ್ರ್ಯ ಹೋರಾಟಗಾರರಾದ ತಂದೆ ಡಾ. ಮಹಾದೇವಪ್ಪ ಪಟ್ಟಣ ಜನ್ಮದಿನ ನಿಮಿತ್ತ ಬಹತ್

ಉಚಿತ ಆರೋಗ್ಯಮೇಳ ಹಮ್ಮಿಕೊಳ್ಳಲಾಗುವುದು ಎಂದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ವಿವೇಕ ಹೊನ್ನಳ್ಳಿ, ಟಿಎಚ್‌ಒ ಡಾ. ನವೀನ ನಿಜಗುಲಿ, ಡಾ. ಆರ್.ಎಸ್. ಬಂತಿ, ಡಾ. ಎಂ.ಬಿ. ತಡಹಾಳ, ಡಾ. ಮಂಜುನಾಥ ಭಜಂತ್ರಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಐನಾಪೂರ, ಶಿವಾನಂದ ಹೊಸೂರ ಇತರರಿದ್ದರು.

ಆಸ್ಪತ್ರೆ ನಿರ್ಮಾಣಕ್ಕೆ 41 ಕೋಟಿ ರೂ. ಅನುದಾನ ಮಂಜೂರು: ಸರ್ಕಾರಿ ತಾಲೂಕು ಆಸ್ಪತ್ರೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 41 ಕೋಟಿ ರೂ. ಅನುದಾನ ಮಂಜೂರಾಗಿದೆ. ಪಟ್ಟಣದ ಹತ್ತಿರ ನನ್ನ ತಂದೆ ಹೆಸರಿನಲ್ಲಿ ಅಗತ್ಯ ನಿವೇಶನ ಖರೀದಿಸಿ ನೂತನ ಬಹತ್ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಶಾಸಕ ಅಶೋಕ ಪಟ್ಟಣ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net