ಇಂಥ ಮುಖ್ಯಮಂತ್ರಿ ಇದ್ದರೆಷ್ಟು ಬಿಟ್ಟರೆಷ್ಟು

If only there was a Chief Minister like this
If only there was a Chief Minister like this
Published on

ಮಹಾಲಿಂಗಪುರ: ಅಧಿಕಾರದ ದರ್ಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ಕರ್ತವ್ಯನಿರತ ದಕ್ಷ ಪೊಲೀಸ್ ಅಧಿಕಾರಿಗೆ ಹೊಡೆಯುವ ರೀತಿ ಕೈ ಮಾಡಿ, ಅಸಭ್ಯವಾಗಿ ವರ್ತಿಸಿ ಪೊಲೀಸ್ ಇಲಾಖೆಗೆ ಅವಮಾನ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಿದ್ದುಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಮುಧೋಳ ತಾಲೂಕಿನ ರನ್ನ ಬೆಳಗಲಿ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಮುಧೋಳ - ನಿಪ್ಪಾಣಿ ರಾಜ್ಯ ಹೆದ್ದಾರಿ ತಡೆದು ಮಾತನಾಡಿದ ಅವರು, ಜನರ ರಕ್ಷಣೆಗೆ ಇರುವ ಇಲಾಖೆಗೆ ಗೌರವ ನೀಡದ ಮುಖ್ಯಮಂತ್ರಿ ಇದ್ದರೆಷ್ಟು ಬಿಟ್ಟರೆಷ್ಟು, ಇಂತಹ ಮುಖ್ಯಮಂತ್ರಿ ರಾಜ್ಯಕ್ಕೆ ಅವಶ್ಯ ಇಲ್ಲ. ಸಿದ್ದರಾಮಯ್ಯನವರು ತಕ್ಷಣ ಕ್ಷಮೆ ಯಾಚಿಸಬೇಕು. ಇಲ್ಲ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆಯಲಿ ಎಂದರು.

ಧಾರವಾಡದ ಅಡಿಷನಲ್ ಎಸ್‌ಪಿ ನಾರಾಯಣ ಬರಮನಿಯವರು ರನ್ನ ಬೆಳಗಲಿ ಪಟ್ಟಣದವರಾಗಿರುವುದರಿಂದ ಸ್ಥಳೀಯ ಅಭಿಮಾನಿಗಳು, ಈ ಘಟನೆಯನ್ನು ಖಂಡಿಸಿ ಪಕ್ಷಾತೀತವಾಗಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿತು.

ಶ್ರೀರಾಮ ಸೇನೆಯ ಮಹಾಲಿಂಗಪ್ಪ ಗುಂಜಿಗಾಂವಿ ಮತ್ತು ಇತರರು ಘಟನೆಗೆ ಉಗ್ರವಾಗಿ ಖಂಡಿಸಿ ಮಾತನಾಡಿದರು. ಈ ಸಮಯದಲ್ಲಿ ಪಟ್ಟಣದ ಪ್ರಮುಖರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net