ಉಪೇಂದ್ರನನ್ನು ಬಂಧಿಸದಿದ್ದರೆ ಹೋರಾಟ

sena trust
Published on

ಹುಬ್ಬಳ್ಳಿ: ಅಸಂವಿಧಾನಿಕ ಶಬ್ಧ ಬಳಸಿದ ನಟ ಉಪೇಂದ್ರರನ್ನು ಮುಂದಿನ 48 ಗಂಟೆಯೊಳಗೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ವಿಶ್ವ ಬಹುಜನ ಧ್ವಜ ಮತ್ತು ಸಂವಿಧಾನ ರಕ್ಷಾ ಸೇನಾ ಟ್ರಸ್ಟ್ ಹೇಳಿದೆ.

ಟ್ರಸ್ಟ್​ನ ರಾಷ್ಟ್ರೀಯ ಅಧ್ಯಕ್ಷ ಸದಾನಂದ ತೇರದಾಳ ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬ್ರಾಹ್ಮಣರ ವಿರುದ್ಧ ಹೇಳಿಕೆಗೆ ನಟ ಚೇತನ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಉಪೇಂದ್ರ ಅವರನ್ನು ಬಂಧಿಸಿ ಶಿಕ್ಷಗೆ ಗುರಿಪಡಿಸಬೇಕು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಉಪೇಂದ್ರರ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಚಿತ್ರರಂಗದಲ್ಲಿ ಯಾವುದೇ ಪಾತ್ರ ವಹಿಸದಂತೆ ಅವರನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net