ಅಗತ್ಯ ಚಿಕಿತ್ಸೆ ಪಡೆದರೆ ಥೈರಾಯ್ಡ ಸಮಸ್ಯೆ ವಾಸಿ

23Anand2
ಕೆಎಲ್‌ಇ ವೇಣುಧ್ವನಿ ಕೇಂದ್ರದಲ್ಲಿ ಫೋನ್-ಇನ್ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ವಿಕ್ರಾಂತ ಘಟನಟ್ಟಿ , ಮನಿಷಾ ಪಿ. ಎಸ್. ಮತ್ತು ಮಂಜುನಾಥ ಪೈ ಇದ್ದರು.
Published on

ಬೆಳಗಾವಿ: ಥೈರಾಯ್ಡ ಸಮಸ್ಯೆಗೆ ಅನೇಕ ಕಾರಣಗಳಿವೆ. ಪ್ರಮುಖವಾಗಿ ಹೈಪೋಥೈರಾಯ್ಡಿಸಂ ಸಮಸ್ಯೆಯಿಂದ ಥೈರಾಯ್ಡ ಸಮಸ್ಯೆ ಉಂಟಾಗುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞವೈದ್ಯ ಡಾ.ವಿಕ್ರಾಂತ ಘಟನಟ್ಟಿ ತಿಳಿಸಿದರು.

ನಗರದ ಕೆಎಲ್‌ಇ ವೇಣುಧ್ವನಿ 90.4 ಎಫ್.ಎಂ. ಕೇಂದ್ರದಲ್ಲಿ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಬುಧವಾರ ಆಯೋಜಸಿದ್ದ ಥೈರಾಯ್ಡ ಸಮಸ್ಯೆ ಕುರಿತು ನೇರ ಫೋನ್-ಇನ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಮಸ್ಯೆಗೆ ಥೈರಾಯ್ಡ ಗ್ರಂಥಿಯ ಅಸಮರ್ಪಕ ಕಾರ್ಯನಿರ್ವಹಣೆ, ವಂಶವಾಹಿ, ಅಯೋಡಿನ್ ಕೊರತೆ ಕಾರಣವಾಗಿವೆ. ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಬೆಳವಣಿಗೆ ಕುಂಠಿತ, ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಮಲಬದ್ಧತೆ ಕಾಯಿಲೆಯ ಲಕ್ಷಣಗಳಾಗಿವೆ.ಅಗತ್ಯ ವೈದೈಕೀಯ ಚಿಕಿತ್ಸೆ ಪಡೆದರೆ ಥೈರಾಯ್ಡ ಸಮಸ್ಯೆ ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.

ಇದೇ ವೇಳೆ ಕೇಳುಗರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ.ಎಸ್. ಮತ್ತು ಮಂಜುನಾಥ ಪೈ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net