

ತಲ್ಲೂರ: ಕ್ಷಯರೋಗದ ಬಗ್ಗೆ ಉದಾಸೀನ ಮಾಡದೆ, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕ ಪರೀಕ್ಷೆ ಮಾಡಿಸಿ ಅಗತ್ಯವಿದ್ದರೆ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ವೈದ್ಯಾಧಿಕಾರಿ ಡಾ.ಪಿ.ಎಸ್. ಸಿಂದಗಿ ಹೇಳಿದರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕ್ಷಯರೋಗ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯಲ್ಲಿ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕದಲ್ಲಿ ರಕ್ತ ಬೀಳುವುದು, ಕ್ರಮೇಣ ದೇಹದ ತೂಕ ಕಡಿಮೆ ಆಗುವುದು, ಹಸಿವು ಆಗದಿರುವುದು, ಸಂಜೆ ವೇಳೆಯಲ್ಲಿ ಜ್ವರ ಬರುವುದು ಕಂಡುಬಂದರೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಜಿ.ಪಿ.ಹೊಂಗಲ, ಎಸ್.ಎ್. ಚನ್ನಮೇತ್ರಿ, ಸಮುದಾಯ ಆರೋಗ್ಯ ಅಧಿಕಾರಿ ಸಿಮಾ ರಾಥೋಡ, ಗೀತಾ ಪೋಳ, ಆರತಿ ಹೊಳ್ಳಿಕೇರಿ, ನೀಲವ್ವ ಬೆನಕಟ್ಟಿ, ಶೋಭ ಚುಳಕಿ, ಭೀಮವ್ವ ಭಜಂತ್ರಿ, ಎಸ್.ಡಿ. ಗೋರಾಬಾಳ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.