ಧ್ಯಾನಾಸಕ್ತರಾದರೆ ಸತ್ಯ ದರ್ಶನ

06 Jaggu 2-Web
ಬೆಳಗಾವಿಗೆ ಶಿವಬಸವ ನಗರದ ಕಾರಂಜಿಮಠದ 20ನೇ ವಾರ್ಷಿಕೋತ್ಸವ, ಉಪನ್ಯಾಸ ಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟಿಸಿದರು. ಶೇಗುಣಸಿ ವಿರಕ್ತಮಠದ ಮಹಾಂತ ದೇವರು, ಡಾ.ಅಲ್ಲಮಪ್ರಭು ಸ್ವಾಮೀಜಿ, ಶ್ರೀ ಗುರುಸಿದ್ಧ ಸ್ವಾಮೀಜಿ ಇದ್ದರು.
Published on

ಬೆಳಗಾವಿ: ಮಾನವ ಜೀವನಕ್ಕೆ ಸಂತೃಪ್ತಿ ಇಲ್ಲ. ಆಸೆಗೆ ಕೊನೆಯೂ ಇಲ್ಲ. ಮಹಾತ್ಮರು ಧ್ಯಾನಾಸಕ್ತರಾಗಿ ಸತ್ಯದ ದರ್ಶನ ಮಾಡಿಕೊಳ್ಳುತ್ತಾರೆ ಎಂದು ಶೇಗುಣಸಿ ವಿರಕ್ತಮಠದ ಶ್ರೀ ಮಹಾಂತ ದೇವರು ಹೇಳಿದರು.

ಶಿವಬಸವ ನಗರದ ಕಾರಂಜಿಮಠದ 20ನೇ ವಾರ್ಷಿಕೋತ್ಸವ, 65ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ನೂತನ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ನಿಯಂತ್ರಣದಲ್ಲಿಟ್ಟುಕೊಂಡರೆ ನಾವು ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದರು.

ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಯೋಗಿ ದೇವರು ನೇತೃತ್ವ ವಹಿಸಿದ್ದರು. ಅಶೋಕ ಚಂದರಗಿ, ವೀರೇಶ ಹಿರೇಮಠ, ಶಶಿಭೂಷಣ ಪಾಟೀಲ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸರಳಾ ಹೆರೇಕರ್, ರತ್ನಕ್ಕ ಬೆಲ್ಲದ, ಡಾ.ಬಸವರಾಜ ಜಗಜಂಪಿ ಮತ್ತಿತರರು ಉಪಸ್ಥಿತರಿದ್ದರು. ಪ್ರೊ.ಶ್ರೀಕಾಂತ ಶಾನವಾಡ ಸ್ವಾಗತಿಸಿದರು. ವಿ.ಕೆ. ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net