ಕೆರೆಗಳು ತುಂಬಿದರೆ ರೈತರಿಗೆ ಅನುಕೂಲ

26kudachi1
Published on

ಕುಡಚಿ: ಕೆರೆಗಳು ತುಂಬಿದರೆ ರೈತರು ಹಾಗೂ ಕುಡಿಯುವ ನೀರಿನ ಜಲ ಮೂಲಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ, ಏತ ನೀರಾವರಿ ಯೋಜನೆ ಹಾಗೂ ಕೆನಾಲ್ ಕಾಲುವೆಗಳ ಮೂಲಕ ಗ್ರಾಮಗಳ ಕೆರೆಗಳನ್ನು ತುಂಬಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೂನ್ ಮೊದಲ ವಾರದಲ್ಲಿ ಸುಟ್ಟಟ್ಟಿ ಕಾಲುವೆಗೆ ನೀರು ಹರಿಸಲಾಗುವುದು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ತಿಳಿಸಿದರು.

ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಕೆರೆ ಹಾಗೂ ಏತ ನೀರಾವರಿ ಯೋಜನೆಯ ಕೃಷ್ಣಾ ನದಿಯಿಂದ ಸುಟ್ಟಟ್ಟಿ ಕೆರೆ ತುಂಬಿಸುವ ಪೈಪಲೈನ್‌ನ್ನು ಸೋಮವಾರ ವೀಕ್ಷಿಸಿ ಅವರು ಮಾತನಾಡಿದರು. ನಮ್ಮ ಸುಟ್ಟಟ್ಟಿ ಕಿನಾಲ ಕಾಲುವೆಗೆ ಈವರೆಗೆ ನೀರು ಹರಿದು ಬಂದಿಲ್ಲ. ಮಳೆಯಾದರೆ ಮಾತ್ರ ಕಾಲುವೆಗೆ ನೀರು ಬರುತ್ತದೆ. ಎಲ್ಲ ಅಧಿಕಾರಿಗಳು ಒಗ್ಗೂಡಿ ಕಾರ್ಯನಿರ್ವಸುವ ಮೂಲಕ ಸುಟ್ಟಟ್ಟಿ ಸೇರಿ ವಿವಿಧ ಗ್ರಾಮಗಳ ಕಾಲುವೆಗಳಿಗೆ ನೀರು ಹರಿಸಬೇಕೆಂದು ಸಂಸದರಿಗೆ ಗ್ರಾಮಸ್ಥರು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ನಾಯಿಕ, ಉಪಾಧ್ಯಕ್ಷ ಶಿವಾನಂದ ಹೆಗಡೆ, ದಸ್ತಗೀರ ಕಾಗವಾಡೆ, ಮುರಾರಿ ಬಾನೆ, ಜೈವೀರ ಬಾಲೋಜಿ, ಸದಾಶಿವ ದಳವಾಯಿ, ಎಂ.ಬಿ.ಸಾಯನವರ, ಸಿ.ಬಿ.ಕುಲಗೂಡ, ಬಸಪ್ಪ ಹೆಗಡೆ, ಕಸ್ತೂರಿ ಅಕ್ಕೇನವರ, ಲಕ್ಷ್ಮಣ ಖೋತ, ವಾಮಣ ಹಟ್ಟಿಮನಿ, ಬಾಬು ನಿಂಗನೂರೆ, ಪರುಶುರಾಮ ಕೋಳೆಕರ, ಮಾರುತಿ ಕಾಂಬಳೆ, ಅಜಿತ ಹೆಗಡೆ, ವಿಠ್ಠಲ ಲಗಳಿ, ಮುತ್ತಪ್ಪ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net