ಕುಮಾರಸ್ವಾಮಿ ಆರೋಗ್ಯ ಸುಧಾರಣೆ ಆಗುವುದಾದರೆ ಅವರು ನನ್ನನ್ನು ಟೀಕಿಸಲಿ: ಡಿ.ಕೆ. ಶಿವಕುಮಾರ್ | DCM

DCM
Published on

ಬೆಂಗಳೂರು: "ನನ್ನ ಮೇಲೆ ಅಸೂಯೆಪಡುವುದರಿಂದ, ನನ್ನನ್ನು ಟೀಕೆ ಮಾಡುವುದರಿಂದ, ನನ್ನನ್ನು ಬಯ್ಯುವುದರಿಂದ ಕುಮಾರಸ್ವಾಮಿ ಅವರಿಗೆ ಖುಷಿಯಾಗಿ, ಅವರ ಆರೋಗ್ಯ ಸುಧಾರಣೆ ಆಗುವುದಾದರೆ ಅವರು ನನ್ನ ನಿಂದನೆ ಮುಂದುವರೆಸಲಿ" ಎಂದು DCM ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಶನಿವಾರ (ಜೂ.07) ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು.

"ನಾನು ಕುಮಾರಸ್ವಾಮಿ ಅವರನ್ನು ಗಮನಿಸುತ್ತಿದ್ದೇನೆ. ಅವರು ತಮ್ಮ ಖುಷಿಗೆ ಮಾತಾಡುತ್ತಿದ್ದಾರೆ. ಅವರು ಏನಾದರೂ ಮಾತನಾಡಲಿ. ಇದರಿಂದ ಅವರಿಗೆ ಖುಷಿಯಾಗಿ ಆರೋಗ್ಯ ಸುಧಾರಣೆ ಆಗುವುದಾದರೆ ಆಗಲಿ. ಅವರ ಆರೋಗ್ಯ ಸುಧಾರಣೆಯಾಗುವುದು ನನಗೆ ಮುಖ್ಯ" ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net