ಕನ್ನಡಿಗರಿಗೆ ಕನ್ನಡ ಕಷ್ಟವಾದರೆ ಅನ್ಯಭಾಷಿಕರಿಗೆ ಸುಲಭವೇ? : ಪ್ರೊ.ನೀಲಗಿರಿ ತಳವಾರ್ ಅಸಮಾಧಾನ

mys-1
Published on

ಮೈಸೂರು: ಕನ್ನಡಿಗರು ಸಹ ಕನ್ನಡ ಕಲಿಕೆ ಕಷ್ಟ ಎಂಬ ಮಾತುಗಳನ್ನು ಆಡುತ್ತಿರುವುದು ಸರಿಯಲ್ಲ. ಇದೊಂದು ಬಾಲಿಶ ಹೇಳಿಕೆಯಾಗಿದ್ದು, ಈ ಹೇಳಿಕೆಯು ಕನ್ನಡಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಶಾಸೀಂು ಕನ್ನಡ ಅತ್ಯುನ್ನತ ಅಧ್ಯಂುನ ಕೇಂದ್ರದ ಂೋಜನಾ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್ ಕಳವಳ ವ್ಯಕ್ತಪಡಿಸಿದರು.

ವಾನಸಗಂಗೋತ್ರಿಂು ಬಿ.ಎಂ.ಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಂುದ ಕುವೆಂಪು ಕನ್ನಡ ಅಧ್ಯಂುನ ಸಂಸ್ಥೆ, ಶಾಸೀಂು ಕನ್ನಡ ಅತ್ಯುನ್ನತ ಅಧ್ಯಂುನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಗುರುವಾರ ಡಾ.ಎನ್.ಎಂ.ಗಿರಿಜಾಪತಿ ರಚನೆಯ ‘ಷಡಕ್ಷರ ಕವಿಂು ಶಬರ ಶಂಕರವಿಳಾಸಂ ವ್ಯಾಖ್ಯಾನ’ ಹಾಗೂ ‘ರಾಮಧಾನ್ಯ’ ನಾಟಕ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ವಾತನಾಡಿ, ಕನ್ನಡ ಕಲಿಕೆ ಕನ್ನಡಿಗರಿಗೆ ಕಷ್ಟವಾದರೆ ಅನ್ಯಭಾಷಿಕರಿಗೆ ಸುಲಭವೇ? ಈ ರೀತಿಯ ಬಾಲಿಶ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದರು.

ಪಾಂಡಿತ್ಯದ ಪರಂಪರೆ ಸೊರಗುತ್ತಿದೆ ಎಂಬ ಕಾಲಘಟ್ಟದಲ್ಲಿ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಡಾ.ಎನ್.ಎಂ.ಗಿರಿಜಾಪತಿ ಸಾಹಿತ್ಯ ಕೃಷಿ ವಾಡಿರುವುದು ಸಂತಸದ ವಿಚಾರ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾಚೀನ ಕನ್ನಡ ಸಾಹಿತ್ಯದ ಗದ್ಯ ಅನುವಾದವನ್ನು ಹೊರ ತಂದಿತ್ತು. ಆ ಬಳಿಕ ಡಾ.ಎಲ್.ಬಸವರಾಜು ಅವರು ಸಾವಾನ್ಯ ಜನರಿಗೆ ಪಂಪನನ್ನು ತಲುಪಿಸಲು ಭಿನ್ನ ದಾರಿ ಹಿಡಿದರು. ಆದಿ ಪಂಪ, ಆದಿ ಪುರಾಣ ಸೇರಿದಂತೆ ಪ್ರಾಚೀನ ಸಾಹಿತ್ಯವನ್ನು ಸರಳೀಕರಣ ಗೊಳಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು.

ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಬಿ.ವಿ. ವಸಂತಕುವಾರ್,ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್, ಕುವೆಂಪು ಕನ್ನಡ ಅಧ್ಯಂುನ ಸಂಸ್ಥೆಂು ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಲೇಖಕ ಡಾ.ಎನ್.ಎಂ.ಗಿರಿಜಾಪತಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net