

ತಿಪಟೂರು: ಕನ್ನಡ ಭಾಷಾ ಬಳಕೆ ದಿನಗಳೆದಂತೆ ಣಿಸುತ್ತಿದೆ. ಇಂದಿನ ಮಕ್ಕಳು ಹಾಗೂ ಕನ್ನಡ ಭಾಷೆಯ ನಡುವೆ ಸಂಬಂಧ ಬೆಸೆಯುವ ಪ್ರಯತ್ನವಾಗಬೇಕಿದೆ ಎಂದು ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕುಮಾರಿ ಚರಿತಾ ಎಸ್. ಸುಜ ಹೇಳಿದರು.
ನಗರದ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಶನಿವಾರ ತಾಲೂಕು ಕಸಾಪ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ 2ನೇ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸದೊಂದಿಗೆ 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಭಾಷೆಯ ಉಸಿರು ಕಡಿಮೆಯಾಗುತ್ತಿದೆ. ಭಾಷೆ ಬೆಳೆಯದೇ ಇದ್ದಲ್ಲಿ ಕರ್ನಾಟಕಕ್ಕೆ ಅಸ್ತಿತ್ವವಿಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಉಳಿಸಿ, ಬೆಳೆಸಿ ಎಂದು ಕರೆಕೊಡುವ ಸ್ಥಿತಿ ನಿಮಾರ್ಣವಾಗಿರುವುದು ಶೋಚನೀಯ ಎಂದರು.
ನಾಡು, ನುಡಿಯ ರಕ್ಷಣೆಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಅತ್ಯಂತ ಮಹತ್ವ ಪಡೆದಿವೆ. ಇಲ್ಲಿ ನಡೆಯುವ ಚಿಂತನ& ಮಂಥನಗಳು, ಕೈಗೊಳ್ಳುವ ತೀಮಾರ್ನಗಳು, ಸರ್ಕಾರಕ್ಕೆ ಸಲ್ಲಿಸುವ ಮನವಿಗಳು ಕನ್ನಡಿಗರ ಮನಸ್ಸಿನಲ್ಲಿ ಪ್ರೇರಣಾದಾಯಕ ಶಕ್ತಿ ಹೊರಹೊಮ್ಮಲು ಸಹಾಯಕವಾಗಿವೆ ಎಂದರು.
2024-&25 ನೇ ಸಾಲಿನಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 5 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳು 34, ಮತ್ತು 10 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳು 90 ಇರುವುದು ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ. ಇಂದಿನ ಮಕ್ಕಳು ಹಾಗೂ ಕನ್ನಡ ಭಾಷೆ ನಡುವೆ ಸಂಬಂಧ ಬೆಸೆಯುವ ಜವಾಬ್ದಾರಿ ಎಲ್ಲರದ್ದಾಗಬೇಕಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಕೆಲಸ ಮಾಡುತ್ತಿವೆ ಎಂದರು.
ಸಮ್ಮೇಳನ ಉದ್ಘಾಟಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ನಡೆಯುವ ವಯಸ್ಕರ ಸಮ್ಮೇಳನದ ರೀತಿ, ಒಂದಿನಿತೂ ವ್ಯತ್ಯಾಸವಿಲ್ಲದಂತೆ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಮಕ್ಕಳಿಗೆ ಪ್ರೀತಿ ಕೊಡಬಹುದು. ಆದರೆ, ಆಲೋಚನೆಗಳನ್ನು ಕೊಡಲು ಸಾಧ್ಯವಿಲ್ಲ. ಮಕ್ಕಳು ಡಾಕ್ಟರ್, ಇಂಜಿನಿಯರ್ಆಗಿ ಎಂದು ನಿರೀಕ್ಷಿಸುವ ಕಾಲಘಟ್ಟದಲ್ಲಿ ಇಂದು ಇಲ್ಲಿ ಮಕ್ಕಳಿಗೆ ಸಾಹಿತ್ಯದ ವಿಷಯ ತಲುಪಿಸುವ ಪ್ರಯತ್ನ ನಡೆದಿರುವುದು ಹೆಮ್ಮೆಯ ವಿಷಯ ಎಂದರು.
ಶಾಸಕ ಕೆ.ಷಡಾಕ್ಷರಿ ಮಾತನಾಡಿ, ಹಿಂದಿನವರು ಉಳಿಸಿ, ಬೆಳೆಸಿ ಹೋದ ಸಾಹಿತ್ಯ, ಸಂಸತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮದಾಗಬೇಕಿದೆ ಎಂದರು.
ಮಕ್ಕಳ ಸಮ್ಮೇಳನಾಧ್ಯಕ್ಷರನ್ನು ಶಾಸಕ ಕೆ. ಷಡಾಕ್ಷರಿ ಸೇರಿದಂತೆ ಇಲಾಖಾಧಿಕಾರಿಗಳು ಮತ್ತು ಶಾಲಾ ಮಕ್ಕಳು ವಿವಿಧ ಸಾಂಸತಿಕ ಮತ್ತು ಕಲಾ ತಂಡಗಳ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆ ತರಲಾಯಿತು. ಸಮ್ಮೇಳನಾಧ್ಯಕ್ಷೆ ಚರಿತಾ ಎಸ್. ಸುಜ, ವಿಚಾರ ಗೋಷ್ಠಿಯ ಅಧ್ಯಕ್ಷೆ ಮನುಜಾ, ಮಕ್ಕಳ ಕವಿ ಗೋಷ್ಠಿ ಅಧ್ಯಕ್ಷೆ ಕೆ.ವರ್ಷ, ನಗರಾಧ್ಯಕ್ಷೆ ಯಮುನಾ, ತಹಸೀಲ್ದಾರ್ ಎಸ್.ಪವನ್ಕುಮಾರ್, ಇಒ ಎಚ್. ಎಂ. ಸುದರ್ಶನ್, ನಗರಾಯುಕ್ತ ವಿಶ್ವೇಶ್ವರ ಬದರಗಡೆ, ಬಿಇಒ ಜಿ. ಚಂದ್ರಯ್ಯ, ಪ್ರಾಂಶುಪಾಲ ಎಂ.ಡಿ.ಶಿವಕುಮಾರ್, ಅಕ್ಷರ ದಾಸೋಹದ ಶಿವಶಂಕರ್ ಇದ್ದರು.
ವಿವಿಧ ಕಾರ್ಯಕ್ರಮಗಳು:
ಇಡೀ ದಿನ ಮಕ್ಕಳಿಗೆ ಮೀಸಲಾದ ವೇದಿಕೆಯಲ್ಲಿ ಸಮ್ಮೇಳನದ ಉದ್ಘಾಟನೆ, ಮಧ್ಯಾಹ್ನ ವಿಚಾರ ಗೋಷ್ಠಿ ಮತ್ತು ಅಪರಾಹ್ನ ಮಕ್ಕಳ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿದ್ದರು.
"ಬಡತನ, ಅನಕ್ಷರತೆ, ಮೂಲಸೌಕರ್ಯಗಳ ಕೊರತೆಯಿಂದ ಹೊರಬಂದಿದ್ದೇವೆ. ಆದರೆ ನೆಮ್ಮದಿ, ಆನಂದ, ಎಲ್ಲಿದೆ ಎಂದು ಹುಡುಕಬೇಕಿದೆ. ಮುಂದಿನ ದಿನಗಳಲ್ಲಿ ತಿಂಗಳ ಪ್ರತಿ 3ನೇ ಶನಿವಾರವನ್ನು ಸಂಭ್ರಮದ ದಿನವಾಗಿ ಆಚರಿಸುವ ಮೂಲಕ ಮಕ್ಕಳಿಗೆ ಭಾಗವಹಿಸುವ ಹಕ್ಕು ಕೊಡಿಸಬೇಕಿದೆ."
-> ಡಾ.ಕೆ.ಟಿ.ತಿಪ್ಪೇಸ್ವಾಮಿ, ಸದಸ್ಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಇತ್ತೀಚೆಗೆ ತಾಲೂಕಿನಲ್ಲಿ ಸಾಂಸತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ಹೆಚ್ಚಲು ಶಾಸಕ ಕೆ. ಷಡಾಕ್ಷರಿ ಅವರೇ ಕಾರಣ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳನ್ನು ಅಭಿವೃದ್ಧಿ ಮಾಡಿ ಬಿಡುತ್ತೇವೆ ಎಂದಲ್ಲ. ಇದು ಆರಂಭದ ಮೆಟ್ಟಿಲು ಅಷ್ಟೇ."
> ಎಂ.ಬಸವರಾಜಪ್ಪ, ಅಧ್ಯಕ್ಷ, ತಾಲೂಕು ಕಸಾಪ