ಧಮ್ಕಿ ಹಾಕಿದ್ದರೆ ಪ್ರಕರಣ ದಾಖಲಿಸಲಿ

sudher Kumar Murolli (1)
Published on

ಕೊಪ್ಪ: ನಾನು ಧಮ್ಕಿ ಹಾಕಿದ್ದರೆ ಪ್ರಕರಣ ದಾಖಲಿಸಬೇಕಿತ್ತು, ಇಲ್ಲ ಸಂಬಂಧಿಸಿದ ಇಲಾಖೆ ಎದುರು ಪ್ರತಿಭಟನೆ ನಡೆಸಬೇಕಿತ್ತು ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಶಬಾನ ರಂಜಾನ್ ಫಾರ್ಮ್ ಪಾಲುದಾರಿಕೆಯಲ್ಲಿ ನಡೆದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿ, ನಾನು ಬಿಜೆಪಿ ಕಾರ್ಯಕರ್ತನೊಂದಿಗೆ ಮಾತನಾಡಿದ ಪ್ರತಿ ಪದಕ್ಕೂ ಬದ್ದನಾಗಿದ್ದೇನೆ. ಶಾಸಕ ಟಿ.ಡಿ.ರಾಜೇಗೌಡ ಅವರ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರದ ಪ್ರದರ್ಶನದ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ಆದರೆ ಒಂದು ಪಾಲುದಾರಿಕೆ ವ್ಯವಹಾರ ಯಾವ ರೀತಿ ನಡೆಯುತ್ತದೆ ಎಂದು ಜೀವರಾಜ್ ಮತ್ತು ಬಿಜೆಪಿಯವರಿಗೆ ಗೊತ್ತಿಲ್ಲ ಎಂದು ದೂರಿದರು.

ಶಬಾನ ರಂಜಾನ್ ಫರ್ಮಾ ಪಾಲಕದಾರಿಕೆ ವ್ಯವಹಾರದಲ್ಲಿ 120 ಕೋಟಿ ನಲ್ಲಿ ರೂ.ಪಾವತಿಯಾಗಿರುವುದು ಟಿ.ಡಿ.ರಾಜೇಗೌಡ, ಡಿ.ಕೆ.ಪುಷ್ಪಾ, ರಾಜ್ದೇವ್ ಖಾತೆಯಿಂದ ಅಲ್ಲ ಎಂಬುದನ್ನು ಬಿಜೆಪಿಗರು, ಪ್ರಕರಣದ ದೂರುದಾರ ಅರ್ಥ ಮಾಡಿಕೊಳ್ಳಬೇಕು. ದಾಖಲೆ ಕೇಳಿದ್ದಾರೆ ಅದನ್ನು ಮಾಜಿ ಶಾಸಕ ಜೀವರಾಜ್ಗೆ ಕಳುಹಿಸಲಾಗುವುದು. ಅವರು ಪರಿಶೀಲಿಸಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲಿ. ಒಂದು ರೂಪಾಯಿ ಸಾರ್ವಜನಿಕ ಹಣ ಬಳಸಿದ್ದರೆ ಶಾಸಕರ ರಾಜೀನಾಮೆ ಕೇಳಲಿ ಎಂದು ತಿಳಿಸಿದರು.

ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್‌ಭಟ್, ಎನ್.ಆರ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲ್ ನಟರಾಜ್, ಕೆಪಿಸಿಸಿ ಸದಸ್ಯ ಸದಾಶಿವ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀಜಿತ್, ಮಿತ್ರ, ಪ್ರಕಾಶ್ ಪೂಜಾರಿ, ರಾಜೇಂದ್ರ, ಅಸಗೋಡು ನಾಗೇಶ್, ಸುಂದ್ರೇಶ್, ಮಾವಿನಕಟ್ಟೆ ನವೀನ್, ಬಿ.ಕೆ.ನಾರಾಯಣಸ್ವಾಮಿ, ನುಗ್ಗಿ ಮಂಜುನಾಥ್, ಎಂ.ಆರ್.ರವಿಶಂಕರ್, ದುರ್ಗಾಚಣ್, ವಿಜಯಾನಂದ, ನವೀನ್ ಕರುವಾನೆ, ಅನಿಲ್ ಹೊಸಕೊಪ್ಪ, ವಕೀಲ ರಜಿತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net