

ಅಕ್ಕಿಆಲೂರ: ಸಮಾಜದಲ್ಲಿ ಮಾನವೀಯತೆ, ನೈತಿಕ ಮೌಲ್ಯಗಳು ಕುಸಿದರೆ ನಮ್ಮ ಸಂಸ್ಕೃತಿಗೆ ಮಾರಕವಾಗಲಿದೆ ಎಂದು ಕೂಡಲ ಗುರುನಂಜುಂಡೇಶ್ವರ ಮಠದ ಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಆಡೂರ ಗ್ರಾಮದ ಮಾಲತೇಶ್ವರ ದೇವಸ್ತಾನದ ಆವರಣದಲ್ಲಿ ಇಂದಿರಾಬಾಯಿ ಮಾರ್ತಂಡಪ್ಪ ನಿಕ್ಕಂ ಸ್ಮರಣಾರ್ಥ ನಿರ್ವಿುಸಿರುವ ನೂತನ ಪ್ರಸಾದ ನಿಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಭರತ ವರ್ಷ, ಭರತ ಖಂಡ ಭಾರತವಾಗಿ ಈ ಭೂಮಿಗೆ ಬೆಳಕಾದ ನಮ್ಮ ದೇಶ, ತ್ಯಾಗ ಮತ್ತು ಸೇವೆಯಿಂದ ಜಗತ್ತಿನಲ್ಲಿ ಮೃತ್ಯುಂಜಯತ್ವ ಸಾಧಿಸಿದೆ. ಇಲ್ಲಿ ದಾನ, ಧರ್ಮ ಸೇವೆ, ಸಾಮಾಜಿಕ ಕಳಕಳಿ ನಿರಂತರವಾಗಿ ನಡೆಯುತ್ತಿರಬೇಕು. ಸಮಾಜಕ್ಕೆ ನೀಡುವ ಮನಸ್ಥಿತಿ ನಿರ್ವಣವಾದಾಗ ಮಾತ್ರ ನಮ್ಮ ಹೃದಯ ವಿಶಾಲವಾಗುತ್ತದೆ. ಈ ದಿಸೆಯಲ್ಲಿ ಪ್ರಸಾದ ನಿಲಯ ನಿರ್ವಣಕ್ಕಾಗಿ ನಮ್ಮ ದುಡಿಮೆ ಹಣ ನೀಡುತ್ತಿರುವ ಸಾಧನಾ ರಾಮಕೃಷ್ಣ ನಿಕ್ಕಂ ಅವರ ಕಾರ್ಯ ಸ್ಮರಣೀಯ ಎಂದು ಹೇಳಿದರು.
ಮಾಲತೇಶ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ನಿಕ್ಕಂ ಮಾತನಾಡಿ, ಸಮುದಾಯದ ಜಾಗೃತಿ , ಕಾಳಜಿ, ಪ್ರೀತಿ ನಮ್ಮಲ್ಲಿ ವ್ಯಕ್ತಿತ್ವ ವಿಕಾಸಗೊಳಿಸುತ್ತದೆ. ರಕ್ತ ಸಂಬಂಧ ಹೊರತುಪಡಿಸಿ, ನೆರೆಹೊರೆಯವರೂ ಬಂಧುಗಳು ಎಂಬ ಮನೋಭಾವ ಅಗತ್ಯವಿದೆ. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕಾಗಿ ಸರ್ವಸ್ವ ಎಂಬ ತ್ಯಾಗದ ಮನಸ್ಥಿತಿ ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ, ಗ್ರಾಪಂ ಅಧ್ಯಕ್ಷ ಮಾಲತೇಶ ರ್ಬಾ, ಉಪಾಧ್ಯಕ್ಷೆ ಕವಿತಾ ಕಡೇರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಎಂ.ಬಿ. ಪೂಜಾರ, ಎಸ್.ವಿ. ಸಂಗೂರಮಠ, ಹನುಮಗೌಡ ಗುರೇಗೌಡ್ರ, ಡಾ.ಕೆ.ಎಸ್. ಕುಲಕರ್ಣಿ, ತಿರಕಪ್ಪ ಲಗೋಟಿ, ಶಿವಾನಂದ ಬನ್ನಿಹಳ್ಳಿ, ಅಪ್ಪಣ್ಣ ಕುಲಕರ್ಣಿ, ಆನಂದ ಮುದ್ದಕ್ಕನವರ, ಗಂಗಪ್ಪ ಗುಳಪ್ಪಣ್ಣನವರ, ಸದಾಶಿವಪ್ಪ ಚನ್ನಬಸಣ್ಣನವರ, ಕಂಡಪ್ಪ ಹುಲಗೂರ, ಸೋಮಲಿಂಗಪ್ಪ ನೆಗಳೂರ, ಅರವಿಂದ ಕುಲಕರ್ಣಿ ಉಪಸ್ಥಿತರಿದ್ದರು.