ರೈತರ ಕಳಕಳಿ ಮರೆತರೆ ತಕ್ಕಶಾಸ್ತಿ

21 NRD-8 FARMAR
Published on

ನರಗುಂದ: ರೈತರ ಸಂಕಷ್ಟಗಳಿಗೆ ಸರ್ಕಾರವೇ ನೇರ ಕಾರಣ. ರೈತರ ಬಗ್ಗೆ ಕಳಿಕಳಿಯಿಲ್ಲದ ಸರ್ಕಾರಗಳನ್ನು ಬೆಂಬಲಿಸಲು ರೈತರು ಸಿದ್ದರಿಲ್ಲ ಎಂಬುದು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಫಲಿತಾಂಶ ಸಾಬೀತು ಪಡಿಸಿದೆ ಎಂದು ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶಸ್ವಾಮಿ ಸೊಬರದಮಠ ಹೇಳಿದರು.

44ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಹುತಾತ್ಮ ರೈತನ ವೀರಗಲ್ಲಿಗೆ ಭಾನುವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, 10 ವರ್ಷದಿಂದ ಮಹದಾಯಿ-ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನಿರಂತರ ಧರಣಿ ನಡೆಸಲಾಗುತ್ತಿದೆ. ಆದರೆ, ಸರ್ಕಾರಗಳು ಸ್ಪಂದಿಸುತ್ತಿಲ್ಲ. ನ್ಯಾಯ ಮಂಡಳಿಯಿಂದ ಹಂಚಿಕೆ ಮಾಡಿದ 13.5 ಟಿಎಂಸಿ ನೀರು ಪಡೆಯಲು ಆಗುತಿಲ್ಲ. ಕೇಂದ್ರದ ಸಚಿವರ ವೈಖರಿಗೆ ರೈತರು ಕುಪಿತಗೊಂಡಿದ್ದಾರೆ ಎಂದರು.

ಈರಪ್ಪ ಕಡ್ಲಿಕೊಪ್ಪ ಅವರ ಸ್ಮಾರಕ ಭವನಕ್ಕೆ ನೀರಾವರಿ ವಿಭಾಗದ 2 ಎಕರೆ ಜಮೀನು ಕೇಳಿದ್ದರೂ ಅದನ್ನು ನೀಡಲು ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ದೂರಿದರು.

ಈರಬಸಪ್ಪ ಹೂಗಾರ, ಚಂದ್ರಗೌಡ ಪಾಟೀಲ, ಎಸ್.ಬಿ. ಜೋಗಣ್ಣವರ. ಶಿವಪ್ಪ ಸಾತನ್ನವರ, ಹನುಮಂತ ಸರನಾಯ್ಕರ್, ರಾಘವೇಂಧ್ರ ಗುಜಮಾಗಡಿ, ಅರ್ಜುನ ಮಾನೆ, ಇತರರಿದ್ದರು.

ವಿವಿಧ ಸಂಘಟನೆಗಳ ನಮನ: ನರಗುಂದ ಪಟ್ಟಣದಲ್ಲಿ ವಿವಿಧ ರೈತಪರ, ಕನ್ನಡಪರ, ದಲಿತಪರ ಸಂಘಟನೆ ಹಾಗೂ ವಿವಿಧ ಸಂಘ-

ಸಂಸ್ಥೆ, ರಾಜಕೀಯ ಪಕ್ಷಗಳಿಂದಲೂ ರೈತ ಹುತಾತ್ಮ ದಿನ ಆಚರಿಸಲಾಯಿತು.

ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ರೈತರನ್ನು ಎದುರು ಹಾಕಿಕೊಳ್ಳುವ ಸರ್ಕಾರಕ್ಕೆ ಉಳಿಗಾಲವಿಲ್ಲ. ಕೇಂದ್ರ ಸರ್ಕಾರ ಇಚ್ಛಾಶಕ್ತಿ ತೋರಿದರೆ ಮಹದಾಯಿ ಕಳಸಾ,

ಬಂಡೂರಿ ಯೋಜನೆ ಅಸಾಧ್ಯವೇ ಅಲ್ಲ ಎಂದರು. ಜೆೆಡಿಎಸ್ ಜಿಲ್ಲಾಧ್ಯಕ್ಷ ಮಕ್ತುಂಸಾಬ್ ಮುಧೋಳ ಮಾತನಾಡಿ, ಕಳಸಾ, ಬಂಡೂರಿ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷದ ನಾಯಕರು ರೈತರ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡಿವೆ ಎಂದರು. ಕೊಡಿಹಳ್ಳಿ ಚಂದ್ರಶೇಖರ ಮಾತನಾಡಿದರು. ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ, ಡಾ. ಸಂಗಮೇಶ ಕೊಳ್ಳಿಯವರ ಹಾಗೂ ಹಲವು ಸಂಘಟನೆಗಳ ಕಾರ್ಯಕರ್ತರು ವೀರಗಲ್ಲಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net