ಸುಮಲತಾ ಬಳಿ ದಾಖಲೆಗಳಿದ್ದರೆ ನಮ್ಮ ಕಚೇರಿ ತೆರೆದೇ ಇರುತ್ತದೆ: ಸಚಿವ ಆರ್​. ಅಶೋಕ್

Untitled-1
Published on

ಬೆಂಗಳೂರು: ಕಳೆದೊಂದೆರಡು ದಿನಗಳಿಂದ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಷ್ ನಡುವೆ ನಡೆಯುತ್ತಿರುವ ವಾಕ್ಸಮರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್​. ಅಶೋಕ್​ ಪ್ರತಿಕ್ರಿಯಿಸಿದ್ದು, ಅದನ್ನು ಯುದ್ಧಕ್ಕೆ ಹೋಲಿಸಿದ್ದಾರೆ.

ಮಂಡ್ಯದಲ್ಲಿ ಅದೊಂದು ನಿಲ್ಲದ ಯುದ್ಧ. ಇಸ್ರೇಲ್​-ಪ್ಯಾಲಿಸ್ತೇನ್ ಮಧ್ಯದ ಯುದ್ಧವಾಗಿದೆ. ಇದು ಅವರ ನಡುವಿನ ವೈಯಕ್ತಿಕ ಜಗಳ, ದೇವೇಗೌಡರೇ ಅದರಿಂದ ಹಿಂದೆ ಸರಿದಿದ್ದಾರೆ ಎಂದು ಆರ್. ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಕಂದಾಯ ಭೂಮಿಯಲ್ಲಿ ಅಕ್ರಮ‌ ಗಣಿಗಾರಿಕೆ ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಅಶೋಕ್​, ಅಕ್ರಮ ಗಣಿಗಾರಿಕೆ ನಡೆಸಲು ಅವಕಾಶವಿಲ್ಲ. ಗಣಿಗಾರಿಕೆಯನ್ನು ಅಣೆಕಟ್ಟಿನಿಂದ ಇಷ್ಟು ದೂರದಲ್ಲೇ ನಡೆಸಬೇಕೆಂಬ ನಿಯಮವಿದೆ. ಅದಾಗ್ಯೂ ಅಕ್ರಮ ಗಣಿಗಾರಿಕೆ ಕುರಿತು ಸುಮಲತಾ ಬಳಿ ದಾಖಲೆಗಳಿದ್ದರೆ ನಮ್ಮ ಕಚೇರಿ ತೆರೆದೇ ಇರುತ್ತದೆ, ಕಚೇರಿಗೆ ಬಂದು ದೂರು ಸಲ್ಲಿಸಬಹುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net