ಮಕ್ಕಳಿಗೆ ಸುಸಂಸ್ಕೃತ ಶಿಕ್ಷಣ ಸಿಕ್ಕರೆ ಉತ್ತಮ ಪ್ರಜೆ

13 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂಚಮುಖಿ ಶಿಕ್ಷಣ ಹಾಗೂ ಶಾಲೆ ಒಂದು ಪರಿವರ್ತನಾ ಕೇಂದ್ರ. ಮಕ್ಕಳಿಗೆ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಪ್ರಕಾರದಲ್ಲಿ ಶಿಕ್ಷಣ ನೀಡಿದರೆ ಜ್ಞಾನವಂತರು, ರಾಷ್ಟ್ರ ಭಕ್ತರಾಗುತ್ತಾರೆ ಎಂದು ವಿದ್ಯಾಭಾರತಿ ಕ್ಷೇತ್ರೀಯ ನೈತಿಕ ಹಾಗೂ ಆಧ್ಯಾತ್ಮಿಕ ಸಂಯೋಜಕ ವೆಂಕಟರಮಣ ಹೇಳಿದರು.
ನಗರದ ಮಾಧವನಗರ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರ (ಸಿಬಿಎಸ್​ಸಿ ಶಾಲೆ)ದಲ್ಲಿ ವಿದ್ಯಾ ಭಾರತಿ ಜಿಲ್ಲಾ ಘಟಕ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಶೈಕ್ಷಣಿಕ ಸಹಮಿಲನ ಹಾಗೂ ಶಿಕ್ಷಕರ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಷಯವಾರು ಶಿಕ್ಷಕರ ಕಾರ್ಯಗಾರದಲ್ಲಿ ಕಲಿಕಾ ಪದ್ಧತಿ, ಪಾಠೋಪಕರಣಗಳ ತಯಾರಿ ಹಾಗೂ ಉಪಯೋಗ ಕುರಿತು ಮಾಹಿತಿ ನೀಡಲಾಯಿತು.
ವಿದ್ಯಾಭಾರತಿ ಜಿಲ್ಲಾಧ್ಯಕ್ಪ ಶಾಂತಣ್ಣ ಕಡಿವಾಳ, ಅಶೋಕ ನಾಯಕ, ರಾಷ್ಟ್ರೊತ್ಥಾನ ವಿದ್ಯಾಕೇಂದ್ರದ ಪ್ರಾಚಾರ್ಯೆ ಅನಿತಾ ರೈ, ನರಸಿಂಹ ಗಲಗಲಿ, ಆನಂದ ಕುಲಕರ್ಣಿ, ಸುನೀಲ ಶಿರಾಲಿ, ಕರವೀರಪ್ಪ ಮಡಿವಾಳರ, ವಿದ್ಯಾಭಾರತಿಗೆ ಸಂಲಗ್ನಗೊಂಡ 16 ಶಾಲೆಗಳಿಂದ 120 ಶಿಕರು ಭಾಗವಹಿಸಿದ್ದರು. ಸುಹಾಸ ಆನೆಗುಂದಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net