ಜಾತಿ, ಧರ್ಮವೇ ಮುಖ್ಯವಾದರೆ ದೇಶಕ್ಕೆ ಅಪಾಯ : ವಿಶ್ವೇಶ್ವರ ಹೆಗಡೆ ಕಾಗೇರಿ

kageri
Published on

ಮೈಸೂರು: ದೇಶ ಮೊದಲು ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಎಲ್ಲಿಯ ತನಕ ನಮ್ಮ ಧರ್ಮ, ನಮ್ಮ ಜಾತಿ, ಉಪ ಜಾತಿ, ನಮ್ಮ ಶ್ರದ್ಧೆ, ಭಕ್ತಿ, ನಂಬಿಕೆಗಳು ದೇಶಕ್ಕಿಂತ ಮೊದಲು ಎಂಬ ಮನೋಭಾವನೆ ಬಂದರೆ ದೇಶ ಅಪಾಯಕ್ಕೆ ಸಿಲುಕುತ್ತದೆ ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಸಿದರು.

ಪಂಡಿತರತ್ನಂ ಕೆ.ಎಸ್. ವರದಾಚಾರ್ಯ ಶತಮಾನೋತ್ಸವ ಸಮಿತಿ ವತಿಯಿಂದ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾ ನೋತ್ಸವ ಭವನದಲ್ಲಿ ಶನಿವಾರ ಹಮ್ಮಿಕೊಂಡ ಕೆ.ಎಸ್. ವರದಾಚಾರ್ಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಧರ್ಮ, ಜಾತಿಗಿಂತ ದೇಶ ಎಂದಿಗೂ ದೊಡ್ಡದು. ನಮಗೆ ದೇಶ ಮೊದಲು ಅನ್ನಿಸದೆ ಬೇರೆ ವಿಚಾರಗಳು ದೊಡ್ಡದಾದರೆ ದೇಶವನ್ನು ರಕ್ಷಣೆ ಮಾಡುವುದು ಕಷ್ಟ. ಹಾಗಾಗಿ ದೇಶಭಕ್ತಿ ಮೂಡುವ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಪಂಡಿತರತ್ನಂ ಕೆ.ಎಸ್. ವರದಾಚಾರ್ಯರು ಅವರ ರಾಷ್ಟ್ರ ಹಿತದ ಕಲ್ಪನೆಯಲ್ಲಿ ನಾವು ಎಲ್ಲರು ಮುಂದೆ ಸಾಗಬೇಕು ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net