ಕಲಾವಿದರ ಕಡೆಗಣಿಸಿದರೆ ಜನಪದ ಕಲೆ ಸಾಹಿತ್ಯ ಕಣ್ಮರೆ

30KDR1
ಅಜ್ಜಂಪುರದ ಕಲ್ಲೇನಹಳ್ಳಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಐದನೇ ಜಾನಪದ ಸಮ್ಮೇಳನಾಧ್ಯಕ್ಷ ಕರಿಬಸಪ್ಪ ಅವರನ್ನು ಆಹ್ವಾನಿಸಲಾಯಿತು. ಜಿ.ಬಿ.ಸುರೇಶ್, ತಿಪ್ಪೇಶ್, ಮರುಳುಸಿದ್ದಪ್ಪ, ಎಚ್.ಆರ್. ಚಂದ್ರಪ್ಪ, ಶಂಕರಪ್ಪ ಮತ್ತಿತರಿದ್ದರು.
Published on

ಕಡೂರು: ಜನಪದ ಕಲಾವಿದರನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಜಾನಪದ ಕಲೆಗಳು, ಸಾಹಿತ್ಯಗಳು ಕಣ್ಮರೆಯಾಗುತ್ತವೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಕಳವಳ ವ್ಯಕ್ತಪಡಿಸಿದರು.
ಕಲ್ಲೇನಹಳ್ಳಿ ಗ್ರಾಮದಲ್ಲಿ ವಿಶ್ವ ಭಾರತಿಗೆ ಕನ್ನಡದ ಆರತಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಐದನೇ ಜಾನಪದ ಸಮ್ಮೇಳನಾಧ್ಯಕ್ಷ ಕರಿಬಸಪ್ಪ ಅವರನ್ನು ಸ್ವಗೃಹದಲ್ಲಿ ಸಮ್ಮೇಳನಕ್ಕೆ ಆಹ್ವಾನಿಸಿ ಮಾತನಾಡಿದರು.
ಜನಪದ ಕಲಾವಿದರು ಮೂಲ ಕೃಷಿಕರಾಗಿದ್ದು, ಜೀವನಾಡಿ ಕೃಷಿಯೊಂದಿಗೆ ಜಾನಪದ ಕಲೆಗಳನ್ನು ಉಳಿಸಬೇಕಿದೆ. ಕೆಲವು ಕಲಾವಿದರು ಈ ಕಲೆ ನಂಬಿ ಬದುಕುವರಿದ್ದಾರೆ. ಈ ಹಿನ್ನಲೆಯಲ್ಲಿ ಕಲಾವಿದರಿಗೆ ಹೆಚ್ಚು ಆರ್ಥಿಕ ಸಹಕಾರ ಸಿಗಬೇಕಿದೆ. ಸರ್ಕಾರ ಈ ಕಲೆಗಳು ಮತ್ತು ಕಲಾವಿದರಿಗೆ ಆರ್ಥಿಕ ಸಹಕಾರ ನೀಡುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಸಮ್ಮೇಳನದ ಆಹ್ವಾನ ಸ್ವೀಕರಿಸಿದ ಸಮ್ಮೇಳನಾಧ್ಯಕ್ಷ ಕರಿಬಸಪ್ಪ ಮಾತನಾಡಿ, ಕಳೆದ 35 ವರ್ಷಗಳಿಂದ ಜಾನಪದ ಕಲಾವಿದನಾಗಿ ಕಲೆ ಮತ್ತು ಸಾಹಿತ್ಯದ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಿ ಶ್ರಮಿಸಿದ ಫಲವಾಗಿ ಸಮ್ಮೇಳನಾಧ್ಯಕ್ಷರಾಗು ಸುಯೋಗ ಒದಗಿಬಂದಿದೆ. ಜಾನಪದ ರತ್ನ ದಿ.ಕೆ.ಆರ್.ನಿಂಗಪ್ಪ ಅವರು ಹುಟ್ಟಿದ ಸ್ಥಳದ ಕಲ್ಲೇನಹಳ್ಳಿ ಗ್ರಾಮದಲ್ಲಿ ಅ.6ರಂದು ನಡೆಯುವ ಜಿಲ್ಲಾ ಸಮ್ಮೇಳನವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲು ಪರಿಷತ್‌ನ ಎಲ್ಲಾ ಸಮಿತಿ ಪದಾಧಿಕಾರಿಗಳು ತೊಡಗಿಸಿಕೊಳ್ಳಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net