ಐಇಎಂಎಸ್ ನಲ್ಲಿ ಪದವಿ ಪ್ರದಾನ ಉತ್ಸವ

IMG_20231104_201228_457.jpg
Published on

ಹುಬ್ಬಳ್ಳಿ: ಇಲ್ಲಿಯ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್ಮೆಂಟ್ ಸೈನ್ಸ್ (ಐಇಎಂಎಸ್) ಕ್ಯಾಂಪಸ್ನಲ್ಲಿ ಶನಿವಾರ ಪದವಿ ಪ್ರದಾನ ಉತ್ಸವ ನಡೆಯಿತು.

ಹಳೆಯ ವಿದ್ಯಾರ್ಥಿಗಳ ಸಭೆಯೊಂದಿಗೆ ಉತ್ಸವ- -2023ರ ವಾಷಿರ್ಕ ಕೂಟ ನಡೆಸಲಾಯಿತು.

ಅತಿಥಿಯಾಗಿದ್ದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಮತ್ತು ವ್ಯವಹಾರ ಆಡಳಿತ ವಿಭಾಗದ ಅಧ್ಯಕ್ಷ ಪ್ರೊ. ಎಚ್.ವೈ. ಕಾಂಬಳೆ ಮಾತನಾಡಿ, ಬೆಳವಣಿಗೆ ಗುಣಾತ್ಮಕ ಪದವಾದರೆ ಅಭಿವೃದ್ಧಿಯು ಪರಿಮಾಣಾತ್ಮಕ ಪದವಾಗಿದೆ. ಬೆಳವಣಿಗೆಗಿಂತ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ರಾಷ್ಟ್ರಗಳು ಅರ್ಥಮಾಡಿಕೊಂಡಿವೆ ಎಂದು ಹೇಳಿದರು.

ಬೆಂಗಳೂರಿನ ಹಾರ್ವರ್ಡ್ ಬಿಜನೆಸ್ ಪಬ್ಲಿಷಿಂಗ್ ಎಜ್ಯುಕೇಶನ್ ಪಾಲುದಾರ ಡಾ. ಶೀಲನ್ ಮಿಶ್ರಾ, ಇಂದಿನ ಕಾಲದಲ್ಲಿ ಉತ್ತಮ ಮನುಷ್ಯರಾಗಿರುವುದು ದೊಡ್ಡ ವಿಷಯವಾಗಿದೆ. ನೀವು ಮಾಡುವ ಒಳ್ಳೆಯ ಕಾರ್ಯಗಳು ಖಂಡಿತವಾಗಿಯೂ ನಿಮ್ಮ ಬಳಿಗೆ ಉತ್ತಮವಾದುದನ್ನು ತರುತ್ತದೆ ಎಂದರು.

ಸಂಸ್ಥೆಯ ಗೌರವಾಧ್ಯಕ್ಷ ಸಿಎ ಡಾ. ಎನ್.ಎ. ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾಥಿರ್ ಮಂಜುನಾಥ ಮೋಹಿತೆ ನಿರ್ವಹಿಸಿದರು.

ಡಾ. ರ್ಪೂಣಿಮಾ ಚರಂತಿಮಠ ಸ್ವಾಗತಿಸಿದರು, ನಿರ್ದೇಶಕ ಡಾ. ವೀರಣ್ಣ ಡಿ.ಕೆ. ವರದಿ ಮಂಡಿಸಿದರು, ಪ್ರೊ. ಪ್ರೀತಿ ಬೆಳಗಾಂವಕರ ಮತ್ತು ಪ್ರೊ. ಪ್ರೀತಿ ಗೌಡರ್ ಕಾರ್ಯಕ್ರಮ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net