

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ದಾವಣಗೆರೆ ವಿಶ್ವವಿದ್ಯಾಲಯದ ಇನ್ಸಿ್ಟಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಡೆಸಿದ ಉತ್ಕರ್ಷ-2025 ಅಂತರ್ ಕಾಲೇಜ್ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಕೈಜೆನ್ ಏಜುಪ್ಲಸ್ ಸೊಸೈಟಿಯ ಇನ್ಸಿ್ಟಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್ಮೆಂಟ್ ಸೈನ್ಸ್ (ಐಇಎಂಎಸ್ ಬಿ-ಸ್ಕೂಲ್) ಉತ್ತಮ ಸಾಧನೆ ಮಾಡಿದೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆರು ಬಹುಮಾನಗಳನ್ನು ಪಡೆದಿದ್ದಾರೆ.
ವಿವಿಧ ಸ್ಪರ್ಧೆಗಳಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಐಇಎಂಎಸ್ ಮಹಾವಿದ್ಯಾಲಯದ ಸ್ನೇಹಾ ನಾಯಕ, ಚಂದ್ರಿಕಾ ಅರ್ಕಸಾಲಿ, ಸೋನಾಲಿ ಕೋಳಿ, ಶ್ರೇಯಾ ಬಸವಪಟ್ಟಣ, ವಿನಯ ಮಾದರ ಹಾಗೂ ವರುಣ ಬಹುಮಾನ ಜಯಿಸಿದರು.
ಸಂವಹನ ಕೌಶಲ, ನಾಯಕತ್ವ ಗುಣ, ಸಮಕಾಲೀನ ಸಮಸ್ಯೆಗಳು, ಬಿಜಿನೆಸ್ ಕ್ಲಿಜ್, ಇನ್ನಿತರ ವಿಷಯಗಳ ಮೇಲೆ ಸ್ಪರ್ಧೆಗಳು ನಡೆದವು.