

ರಾಯಚೂರು ತಾಲೂಕಿನ ಎಲï.ಕೆ.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸದಿಡ್ಡಿ ಗ್ರಾಮದಲ್ಲಿ ಕೆರೆ ಹೂಳೆತ್ತುವದು ಕಾಮಗಾರಿ ಸ್ಥಳಕ್ಕೆ ಶನಿವಾರ ಐಇಸಿ ಜಿ¯್ಲÁ ಸಂಯೋಜಕ ವಿಶ್ವನಾಥ ಭೇಟಿ ನೀಡಿದರು.
ನಂತರ ಮಾತನಾಡಿ,ನರೇಗಾ ಕಾಮಗಾರಿ ಎ¯್ಲÁ ಜನರಿಗೂ ಆರ್ಥಿಕ ಸ್ವಾವಲಂಬಿ ಜೀವನ ಮಾಡಲಿಕ್ಕೆ ಈ ಯೋಜನೆ ತುಂಬಾ ಸಹಾಯಕವಾಗಿದೆ.
ನರೇಗಾ ಕೂಲಿ ೩೭೦ ರೂಪಾಯಿಗಳು ಹೆಚ್ಚಳವಾಗಿದ್ದು, ಗಂಡು ಹೆಣ್ಣಿಗೆ ಸಮನ ಕೂಲಿ ನೀಡಲಾಗುತ್ತದೆ. ಇದರಿಂದ ಕೂಲಿಕಾರರು ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಬರಬೇಕು. ಹಾಗೂ ವಲಸೆ ಹೋಗುವದನ್ನು ತಪ್ಪಿಸಬೇಕು ಹಾಗೂ ಯೋಜನೆಯಡಿ ೬೫ ವರ್ಷ ಮೇಲ್ಪಟ್ಟ ವೃದ್ಧರಿಗೆ, ಅಂಗವಿಕಲರಿಗೆ ಹಾಗೂ ಗರ್ಭಿಣಿಯರಿಗೆ ಶೇ. ೫೦ ಕೆಲಸ ಮಾಡಿದರು ಪೂರ್ತಿ ಪ್ರಮಾಣದ ಕೂಲಿ ನೀಡಲಾಗುತ್ತದೆಂದರು.
ಈ ಸಂದರ್ಭದಲ್ಲಿ ತಾಲೂಕು ಸಂಯೋಜಕರಾದ ಧನರಾಜ, ದೇವಮ್ಮ ಸೇರಿದಂತೆ ನರೇಗಾ ಕೂಲಿ ಕಾರ್ಮಿಕರು ಇದ್ದರು.