

ಸಿರಗುಪ್ಪ: ತಾಲೂಕಿನ ಭೈರಗಾಮದಿನ್ನೆಯಲ್ಲಿ ಭಾನುವಾರ ದ್ಯಾವಮ್ಮ ದೇವಿ ದೇವಸ್ಥಾನ ಉದ್ಘಾಟನೆ ಮತ್ತು ಸುಂಕ್ಲಮ್ಮ, ಲಕ್ಷ್ಮಮ್ಮ ಹಾಗೂ ಪೋತರಾಜ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಸಂಪನ್ನಗೊಂಡಿತ್ತು.
ಇದನ್ನೂ ಓದಿ: ಕಳಚಿ ಬಿದ್ದ ರಾಮೇಶ್ವರ ದೇಗುಲ ಗೋಪುರ ವಿಗ್ರಹ
ಜಲ, ಕ್ಷೀರ, ಧಾನ್ಯ, ಗೋಪೂಜೆ, ಉಮಾ ಮಹೇಶ್ವರ, ವಿಘ್ನೇಶ್ವರ, ನವದುರ್ಗಿ, ನವಗ್ರಹ, ಪಂಚ ಕಳಸ ಪೂಜೆ, ಹೋಮ, ಹವನ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಹಿಳೆಯರು ಕಳಸ, ಕುಂಭ ಹೊತ್ತು ಡೊಳ್ಳು, ಮೇಳದೊಂದಿಗೆ ಗಂಗಾ ಪೂಜೆ ಸಲ್ಲಿಸಿದರು.
ರೌಡಕುಂದ ಸಂಸ್ಥಾನ ಮಠಾಧಿಪತಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಬಂಗಾರಿಕ್ಯಾಂಪ್ ಸಿದ್ಧಾಶ್ರಮದ ಸಿದ್ಧರಾಮೇಶ್ವರ ಶರಣರ ನೇತೃತ್ವದಲ್ಲಿ ಎಲೆಕೂಡ್ಲಿಗಿಯ ಅಮರೇಶ ಶಾಸ್ತ್ರಿ, ಕೆಸರಟ್ಟಿಯ ಶಿವಪುತ್ರಯ್ಯ ಶಾಸ್ತ್ರಿ, ಜುಮಲಾಪುರದ ಶಶಿಧರ ಶಾಸ್ತ್ರಿ, ಬಸಾಪುರದ ಶಿವರಾಜ ಶಾಸ್ತ್ರಿ, ಭೈರಗಾಮದಿನ್ನೆಯ ಶಿವಪುತ್ರ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು.