ಮೆಡ್ಲೆರೇಶ್ವರ ದೇವರ ಮೂರ್ತಿಪ್ರತಿಷ್ಠಾಪನೆ

Murty
Published on

ಸವಣೂರ: ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಮೆಡ್ಲೆರೇಶ್ವರ ದೇವರ ಮರು ಮೂರ್ತಿಪ್ರತಿಷ್ಠಾಪನೆ ಭಾನುವಾರ ಬಾಹ್ಮಿ ಮುಹೂರ್ತದಲ್ಲಿ ಜರುಗಿತು. ವೆ. ವೀರಯ್ಯಶಾಸ್ತ್ರೀ ಹಿರೇಮಠ ಅವರಿಂದ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಪೂಜೆ ಕೈಗೊಳ್ಳಲಾಯಿತು.

ಭಕ್ತರಿಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಕೊಳ್ಳವರ, ಉಪಾಧ್ಯಕ್ಷ ಸಣ್ಣಿಂಗಪ್ಪ ಮಣಿಗಾರ, ಗ್ರಾಮಸ್ಥರಾದ ರಾಮಣ್ಣ ಮತ್ತೂರು, ಯಲ್ಲಪ್ಪ ಬಡಕ್ಕನವರ, ಕರಿಯಪ್ಪ ಹೆಂಗಣ್ಣನವರ, ನಿಂಗಪ್ಪ ಕುರಿ, ಫಕೀರಪ್ಪ ಮೆಣಸಕ್ಕನವರ, ನಿಂಗಪ್ಪ ಸಂದ್ಲಿ, ಬೀರಪ್ಪ ಸೆಟ್ಟಪ್ಪನವರ, ವೀರಯ್ಯ ಸಂಕಿನಮಠ, ಸಿದ್ದಪ್ಪ ಕಳ್ಯಾಳ, ಹೆಗ್ಗಪ್ಪ ಪೂಜಾರ, ಈರಪ್ಪ ಎರೆಸೀಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net