ವಿಟ್ಲ: ಮಹಿಳೆಯ ಜತೆಗೆ ಅನುಚಿತವಾಗಿ ವರ್ತಿಸಿದ ಇಡ್ಕಿದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪದ್ಮನಾಭ ಸಾಮಾನ್ಯ ಸಭೆಗೆ ಆಗಮಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು.
ಸಭೆಯಲ್ಲಿ ಎಲ್ಲರಿಗೆ ಸ್ವಾಗತ ಕೋರುವ ಸಂದರ್ಭ ಉಪಾಧ್ಯಕ್ಷರಿಗೆ ಸ್ವಾಗತ ನೀಡಬಾರದು, ಆ ಸ್ಥಾನ ಖಾಲಿಯಿದೆ ಎಂದು ವಿರೋಧ ಪ್ರಾರಂಭವಾಯಿತು. ಉಪಾಧ್ಯಕ್ಷರು ಮಾತನಾಡುವುದಕ್ಕೆ ಅವಕಾಶ ಕೇಳಿದರು. ಸ್ಥಾನದಿಂದ ಎದ್ದು ಬಂದು ಕೆಳಗೆ ಸದಸ್ಯರಾಗಿ ಮಾತನಾಡಬಹುದೆಂದು ಅಭಿಪ್ರಾಯ ವ್ಯಕ್ತವಾಯಿತು. ಪ್ರಕರಣ ದಾಖಲಾದ ಬಳಿಕ ಉಪಾಧ್ಯಕ್ಷ ಸ್ಥಾನವಿಲ್ಲ, ಆಸ್ಥಾನದಲ್ಲಿ ಕೂರುವಂತಿಲ್ಲ ಎಂದು ನಿರ್ಣಯ ಮಾಡಲಾಗಿದೆ ಎಂದು ಸದಸ್ಯರು ಹೇಳಿದರು. ಸದಸ್ಯರ ನಡುವೆ ಹಲವು ಸಮಯದ ತನಕ ಕೊನೆಗೆ ಕೆಳಗೆ ಕೂತ ಬಳಿಕ ಸಾಮಾನ್ಯ ಸಭೆ ಮುಂದುವರಿಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹಿನಿ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕಸಹಾಯಕಿ ರಾಜೇಶ್ವರಿ ಭಾಗವಹಿಸಿದ್ದರು.