ಮಹಿಳೆಯೊಂದಿಗೆ ಅಸಭ್ಯ ವರ್ತನೆ

Published on

ವಿಟ್ಲ: ಗೇಟ್ ಬಂದ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿಕೊಂಡು ಸ್ಥಳಕ್ಕಾಗಮಿಸಿದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ದಾರಿಯನ್ನು ಗೇಟ್ ಅಳವಡಿಸಿ ಬಂದ್ ಮಾಡುವುದನ್ನು ಮಹಿಳೆಯೊಬ್ಬರು ವಿಡಿಯೋ ಮಾಡಿದ್ದಾರೆ. ಈ ಸಂದರ್ಭ ಸಿಟ್ಟಾದ ವ್ಯಕ್ತಿ ಏಕಾಏಕಿ ಬಟ್ಟೆ ಬಿಚ್ಚಿ ಗುಪ್ತಾಂಗದ ಪ್ರದರ್ಶನ ಮಾಡಿದ್ದಾನೆ. ಆತನ ಪಕ್ಕ ಬಾಲಕಿ ನಿಂತಿರುವುದನ್ನೂ ಗಮನಿಸದೆ ಅಸಭ್ಯ ವರ್ತನೆ ಮಾಡಿದ್ದು, ವಿಡಿಯೋದಲ್ಲಿ ದಾಖಲಾಗಿದೆ. ಆರೋಪಿ ಇಡ್ಕಿದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದು, ಅಕ್ಕಪಕ್ಕದ ಎರಡು ಮನೆಗಳಿಗೆ ಹೋಗುವ ದಾರಿಯ ಜಾಗದ ತಕರಾರು ಇತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net