ಹೆತ್ತವರ ಕಷ್ಟ ಅರಿತು ಕೀರ್ತಿ ತನ್ನಿ

1108 KLB 06
Published on

ಕಲಬುರಗಿ: ಮಕ್ಕಳಿಗೆ ಹೆತ್ತವರು ಲಕ್ಷಾಂತರ ರೂ. ಖರ್ಚು ಮಾಡಿ ಶಿಕ್ಷಣ ನೀಡುತ್ತಾರೆ. ಹೆತ್ತವರ ಕಷ್ಟ, ಶ್ರಮ ಅರಿತು ಉತ್ತಮ ಅಧ್ಯಯನ ಮಾಡಿ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ತೀರ್ಥಹಳ್ಳಿಯ ನಿಟ್ಟೂರದ ಶ್ರೀ ನಾರಾಯಣಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ನುಡಿದರು.

ಈಡಿಗ ಸರ್ಕಾರಿ/ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿAದ ನಗರದ ಜಿಲ್ಲಾ ವಿಜ್ನಾನ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಹಣ, ಆಸ್ತಿ ನಮ್ಮೊಂದಿಗೆ ಬರುವುದಿಲ್ಲ. ಕೊನೆಯವರೆಗೂ ಇರುವುದು ವಿದ್ಯೆ ಮತ್ತು ಜ್ನಾನ ರತ್ನ. ವಿದ್ಯೆ ಜತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಪರಿಶ್ರಮದಿಂದ ಓದಿನಲ್ಲಿ ಸಾಧನೆ ಮಾಡಿರುವ ಮಾದರಿಯಲ್ಲಿಯೇ ಸತತ ಅಧ್ಯಯನ ಮಾಡಿ, ಭವಿಷ್ಯದಲ್ಲಿ ಸಾಧಕರಾಗಿ ಹೊರಹೊಮ್ಮಬೇಕು. ದೊರೆತಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎಂದರು.
ಕಲಬುರಗಿ ಬಿಎಸ್‌ಎನ್‌ಎಲ್‌ನ ಡಿಜಿಎಂ ಅನಂತರಾಮ ಎಂ.ಚೌಧರಿ ಮಾತನಾಡಿ, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಂತೆ ಉನ್ನತ ಶಿಕ್ಷಣದಲ್ಲಿ ಶ್ರಮವಹಿಸಿ ಅಧ್ಯಯನ ಮಾಡಬೇಕು. ಗುರಿಯೊಂದಿಗೆ ಕಠಿಣ ಪರಿಶ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ರಾಜೇಶ ಜೆ.ಗುತ್ತೇದಾರ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು. ತಂದೆ, ತಾಯಿ, ಗುರು-ಹಿರಿಯರಿಗೆ ಗೌರವ ನೀಡುವುದು ಮತ್ತು ಕಷ್ಟದಲ್ಲಿರುವ ಜನರಿಗೆ ನೆರವಾಗುವುದು ಮುಖ್ಯ. ಸಂಸ್ಕಾರ ಮತ್ತು ನಡೆತೆಗೆ ತಕ್ಕಂತೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ಪಾಲಕರು ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಬೇಕು. ಅವರ ಆಸೆ, ಆಕಾಂಕ್ಷೆ ಅರಿತು ಪ್ರೋತ್ಸಾಹಿಸಬೇಕು ಎಂದರು.

ಎಸ್‌ಎಸ್‌ಎಲ್‌ಸಿ ೭ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ೨೫ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲಾ ವಿಜ್ನಾನ ಕೇಂದ್ರದ ನಿರ್ದೇಶಕ ಕೆ.ಎಂ.ಸುನೀಲï, ಉದ್ಯಮಿ ಸತೀಶ ಗುತ್ತೇದಾರ, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಇತರರಿದ್ದರು. ಸಂಘದ ಅಧ್ಯಕ್ಷ ರಾಜಕುಮಾರ ಗುತ್ತೇದಾರï ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ವೆಂಕಟೇಶ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net