ವೈಚಾರಿಕ ನೆಲೆಗಟ್ಟಿನಲ್ಲಿ ಹಬ್ಬ ಆಚರಿಸಬೇಕು

2
ಹಿಡಕಲ್ ಡ್ಯಾಮ್‌ನಲ್ಲಿರುವ ದೂದನಾನಾ ವಿಕಾಸ ಶಿಕ್ಷಣ ಸಂಸ್ಥೆಯಲ್ಲಿ ಬಸವ ಪಂಚಮಿ ಆಚರಣೆ ನಿಮಿತ್ತ ಮಕ್ಕಳಿಗೆ ಹಾಲು ವಿತರಿಸಲಾಯಿತು. ವಿಠ್ಠಲ ಮಾದರ, ದಯಾನಂದ ಅಂಕಲಗಿ, ಬಂಡ್ಯಪ್ಪ ಮಾದರ, ಮಲ್ಲೇಶ ಹರಿಜನ ಇತರರಿದ್ದರು.
Published on

ಉಳ್ಳಾಗಡ್ಡಿ-ಖಾನಾಪುರ: ನಾಗರ ಪಂಚಮಿಯನ್ನು ವೈಚಾರಿಕ ನೆಲೆಗಟ್ಟಿನ ಮೇಲೆ ಬಸವ ಪಂಚಮಿಯನ್ನಾಗಿ ಆಚರಣೆ ಮಾಡುವ ಮೂಲಕ ಮೂಢ ನಂಬಿಕೆಗಳಿಗೆ ತಿಲಾಂಜಲಿಯನ್ನಿಡಬೇಕು ಎಂದು ಮಾನವ ಬಂಧುತ್ವ ವೇದಿಕೆ ಸಂಚಾಲಕ ವಿಠ್ಠಲ ಮಾದರ ಹೇಳಿದರು.

ಸಮೀಪದ ಹಿಡಕಲ್ ಡ್ಯಾಮ್‌ನಲ್ಲಿರುವ ದೂದನಾನಾ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ವಸತಿ ಮಕ್ಕಳ ಶಾಲೆಯಲ್ಲಿ ದಲಿತಸೇನೆ ಹಾಗೂ ಮಾನವ ಬಂಧುತ್ವ ವೇದಿಕೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಪಂಚಮಿ ನಿಮಿತ್ತ ಮಕ್ಕಳಿಗೆ ಹಾಲು ನೀಡಿ ಮಾತನಾಡಿ, ಮೌಢ್ಯ ನಿರ್ಮೂಲನೆಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.

ದಯಾನಂದ ಅಂಕಲಗಿ ಮಕ್ಕಳಿಗೆ ಸಸಿ ನೀಡಿದರು. ದಲಿತ ಸೇನಾ ಹುಕ್ಕೇರಿ ತಾಲೂಕಾಧ್ಯಕ್ಷ ಬಂಡೆಪ್ಪ ಮಾದರ, ಮಲ್ಲೇಶ ಹರಿಜನ, ಬಳಪ್ಪ ಹರನಕೊಳ್ಳ, ಲಕ್ಷ್ಮಣ ಪೂಜೇರಿ, ಅಡಿವೆಪ್ಪ ಹರಿಜನ, ಯಲ್ಲಪ್ಪ ಭಜಂತ್ರಿ, ಪ್ರಕಾಶ ಹರಿಜನ, ಸುರೇಶ ಗುಟಗುದ್ದಿ, ರಾಮಚಂದ್ರ ಹಗೆದಳ, ಸಣ್ಣಪ್ಪ ಹಗೆದಾಳ, ಶ್ರೀಕಾಂತ ಹರಿಜನ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net