

ಚಳ್ಳಕೆರೆ: ದೇಶದ ಯುವಶಕ್ತಿ ಮತ್ತು ಸಾರ್ವಜನಿಕರಲ್ಲಿ ದೇಶದ ಭಕ್ತಿ, ಭೂತಾಯಿಯ ಮಹಿಮೆಯ ಅಸ್ಮಿತೆಯನ್ನು ತಿಳಿಸುವ ಸಲುವಾಗಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಅಭಿಯಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ತಾಲೂಕು ಘಟಕ ಬಿಜೆಪಿ ನಗರದ ವೀರಭದ್ರಸ್ವಾಮಿ ದೇವಸ್ಥಾನ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನದಲ್ಲಿ ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಮುಖಂಡರು ಮಹತ್ವವಾಗಿರುವ ನನ್ನ ಮಣ್ಣು ನನ್ನ ದೇಶ ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಎಂದರು.
ನರಹರಿ ಗುರುಪೀಠದ ಡಾ. ಶ್ರೀ ರಾಜರಾಮ್ ಸ್ವಾಮೀಜಿ, ನಗರಸಭಾ ಸದಸ್ಯ ವೆಂಕಟೇಶ್, ಮಾಜಿ ಸದಸ್ಯ ಎಂ.ಶಿವಮೂರ್ತಿ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮ್‌ದಾಸ್, ಪ್ರಧಾನ ಕಾರ್ಯದರ್ಶಿ ಜಿ.ಪಿ. ಜಯಪಾಲಯ್ಯ, ಮುಖಂಡರಾದ ದಿನೇಶ್‌ರೆಡ್ಡಿ, ವೆಂಕಟಪ್ಪ ಹೊನ್ನೂರು, ಆರ್.ಡಿ. ಮಂಜುನಾಥ, ಕೆ.ಪಿ. ತಾರಕೇಶ, ಸಿದ್ದಾಪುರ ರುದ್ರಮುನಿ, ಸುರೇಶ್, ಆರ್. ಕಾಂತರಾಜ್, ಎ. ಮಾರುತಿ ಮತ್ತಿತರರು ಇದ್ದರು.