ಕುರಿಗಾರರ ರಕ್ಷಣೆಗೆ ಗುರುತಿನ ಕಾರ್ಡ್

FotoJet 24 5
Published on

ಶಾಸಕ ಸಿ.ಬಿ.ಸುರೇಶ್‌ಬಾಬು ಮಾಹಿತಿ

ಚಿಕ್ಕನಾಯಕನಹಳ್ಳಿ: ಕುರಿಗಾರರು ವಲಸೆ ಹೋದಾಗ ಅನೇಕ ಸಮಸ್ಯೆಗಳನ್ನು ಎದರಿಸಬೇಕಾಗುತ್ತದೆ. ಅದ್ದರಿಂದ ಅವರ ರಕ್ಷಣೆ ಹಾಗೂ ಸರ್ಕಾರದ ಯೋಜನೆಗಳ ಬಳಕೆಗೆ ಅನುಕೂಲಕ್ಕಾಗಿ ಸರ್ಕಾರ ಈ ಗುರುತಿನ ಕಾರ್ಡ್ ನೀಡುವ ಯೋಜನೆ ತಂದಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಪಟ್ಟಣದ ಪಶುಸಂಗೋಪನಾ ಇಲಾಖೆಯ ಸಭಾಂಗಣದಲ್ಲಿ ಕುರಿಗಾರರಿಗೆ ಗುರುತಿನ ಕಾರ್ಡ್ ವಿತರಿಸಿ ವಾತನಾಡಿ, ತಾಲೂಕಿನಲ್ಲಿ ಒಟ್ಟು 1,62,144 ಕುರಿಗಳು ಹಾಗೂ 39,836 ಮೇಕೆಗಳಿದ್ದು, ಒಟ್ಟು 2,01,980 ಕುರಿ, ಮೇಕೆಗಳಿವೆ. ವಲಸೆ ಕುರಿಗಾರರ ದೌರ್ಜನ್ಯ ತಡೆಕಾಯ್ದೆ ಜಾರಿಗೆ ತರಲಾಗಿದೆ. ಇದರಿಂದ ಇವರು ಬೇರೆಡೆಗೆ ವಲಸೆ ಹೋದಾಗ ಕುರಿಗಾರರ ಮೇಲೆ ದೌರ್ಜನ್ಯ ನಡೆದರೆ ಅವರಿಗೆ 5 ವರ್ಷ ಜೈಲು ಹಾಗೂ ದಂಡ ವಿಧಿಸಲಾಗುವುದು ಹಾಗೂ ವಲಸೆಕುರಿಗಾರರಿಗೆ ಆದ ನಷ್ಟವನ್ನು ಭರಿಸಲು ಕಲ್ಯಾಣ ಮಂಡಳಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಪಶುವೈದ್ಯಾಧಿಕಾರಿ ಡಾ.ವೈ.ಜಿ.ಕಾಂತರಾಜು ವಾತನಾಡಿ, ನೀವು ವಲಸೆ ಹೋದ ಸ್ಥಳಗಳಲ್ಲಿ ನಿಮ್ಮ ಕುರಿಗಳಿಗೆ ಚಿಕಿತ್ಸೆ ನೀಡುವುದು, ಜಂತು ನಾಶಕ ನೀಡುವುದು, ಲಸಿಕೆ ಹಾಕುವುದು ಮತ್ತು ಅನುಗ್ರಹ ಯೋಜನೆಯ ಪರಿಹಾರ ಪ್ರಸ್ತಾವನೆಗಳನ್ನು ಸಲ್ಲಿಸುವುದು ಅಲ್ಲಿಯ ಪಶುವೈದ್ಯಾಧಿಕಾರಿಗಳ ಜವಾಬ್ದಾರಿ ಆಗಿದ್ದು, ಈ ಸೌಲಭ್ಯ ಪಡೆಯಲು ಗುರುತಿನ ಕಾರ್ಡ್ ಹೊಂದಿರಬೇಕು ಎಂದರು.

ಶ್ರೀ ರೇವಣ್ಣಸಿದ್ದೇಶ್ವರ ಕುರಿಸಾಕಾಣಿಕೆದಾರರ ಸಹಕಾರ ಸಂದ ಅಧ್ಯಕ್ಷ ಸಿದ್ದಪ್ಪ ವಾತನಾಡಿ, ಗೋವಾಳ ಮತ್ತು ಕೆರೆ ಅಂಗಳ ಒತ್ತಾವರಿಯಾಗಿರುವುದರಿಂದ ಕುರಿ ಮೇಯಿಸಲು ಜಾಗ ಇಲ್ಲ. ಆದ್ದರಿಂದ ಒತ್ತುವರಿ ತೇರವುಗೊಳಿಸಬೇಕು. ತಾಲೂಕಿನಲ್ಲಿ ತೂಕದ ಮೇಲೆ ಕುರಿ ವಾರಾಟ ವಾಡುವಂತ ಸುಸಜ್ಜಿತ ವಾರುಕಟ್ಟೆ ನಿರ್ಮಿಸಿಕೊಡುವಂತೆ ಮನವಿ ವಾಡಿದರು.

ಐತಿಹಾಸಿಕ ಕಾರ್ಯಕ್ರಮಕ್ಕೆ ಸಿಎಂ:

ಸಮಾಜದ ಎಲ್ಲ ದಾರ್ಶನಿಕ ಮಹನೀಯರ ಜಯಂತಿಯನ್ನು ನ.26ರಂದು ಒಂದೇ ವೇದಿಕೆಯಲ್ಲಿ ಆಚರಿಸಲು ತೀರ್ಮಾನ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಉದ್ಘಾಟಿಸಲಿದ್ದಾರೆ. ಒಟ್ಟು 52 ಜನ ದಾರ್ಶನೀಕರನ್ನೊಳಗೊಂಡ 32 ಸಮುದಾಯದ ಎಲ್ಲರೂ ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ಪಟ್ಟಣದ ತೀನಂಶ್ರೀಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ತಹಸೀಲ್ದಾರ್ ಕೆ.ಪುರಂದರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net