

ಅಕ್ಕಿಆಲೂರ: ಎಲ್ಲ ಮಕ್ಕಳಲ್ಲಿ ಸಮಾನ ಸಾಮರ್ಥ್ಯವಿರುತ್ತದೆ. ಅದನ್ನು ಗುರುತಿಸಿ ಮತ್ತು ಅರ್ಥೈಸುವ ಕೆಲಸ ಪಾಲಕರು ಮತ್ತು ಶಿಕ್ಷಕರಿಂದ ನಡೆಯಬೇಕು ಎಂದು ಹಾವೇರಿಯ ಮುರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ಸೋಮನಾಥ ಡಿ., ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಕಲಾ ಮತ್ತು ಎಸ್.ಬಿ. ಜಾಬೀನ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಆತ್ಮವಿಶ್ವಾಸದ ಕೊರತೆಯಿಂದ ಅನೇಕರು ಸಮಾಜದ ಮುಖ್ಯವಾಹಿನಿಗೆ ಬರುವುದಿಲ್ಲ. ಹೀಗಾಗಿ ಮಕ್ಕಳಲ್ಲಿನ ಕೌಶಲ ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಬೇಕು ಎಂದರು.
ಕುಸನೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂದಿರಮ್ಮ ಹಳೆಮನಿ ಮಾತನಾಡಿದರು. ಶಿಕ್ಷಣ ಸಂಘದ ಖಜಾಂಚಿ ವಿ.ಎಚ್. ಪೂಜಾರ, ನಿರ್ದೇಶಕ ಬಿ.ಪಿ. ಅಂಕಸಖಾನಿ, ಚೇರ್ಮನ್ ಎಂ.ಎಸ್. ದೇಸಾಯಿ, ಗೌರವ ಕಾರ್ಯದರ್ಶಿ ಎಸ್.ಸಿ. ಪಾವಲಿ, ಕೌನ್ಸಿಲ್ ಚೇರ್ಮನ್ ಕುಮಾರ ಧಾರವಾಡ, ನಿರ್ದೇಶಕರಾದ ಎಸ್.ಜಿ. ಮೋಟಗಿ, ಎನ್.ಎನ್. ಬಾಬಜಿ, ಉದಯಕುಮಾರ ವಿರುಪಣ್ಣನವರ, ಉಮೇಶ ಬೆಲ್ಲದ, ಜಿ.ವಿ. ಕೋರಿ, ಎಸ್.ಸಿ. ಬೆಲ್ಲದ, ಯು.ಬಿ. ಕೂಬಿಹಾಳ, ಎಸ್.ಎಂ. ಸಿಂಧೂರ, ಜಿ. ಬಿ. ದೇಸಾಯಿ, ಕಾಲೇಜಿನ ಪ್ರಾಚಾರ್ಯ ಜಿ. ಎನ್. ಮ್ಯಾಗಳಗೇರಿ ಉಪಸ್ಥಿತರಿದ್ದರು.