ಕೃಷಿ ಕ್ಷೇತ್ರದ ವಾಸ್ತವಿಕ ಅಂಶಗಳನ್ನು ಗುರುತಿಸಿ: ಕುಲಪತಿ ಸಲಹೆ

AGFRI RAICHUR
AGFRI RAICHUR
Published on

ರಾಯಚೂರು ಕೃಷಿ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿಯಲು ಅನೇಕ ಕಾರಣಗಳಿದ್ದು, ಅವುಗಳನ್ನು ಆದ್ಯತೆಯ ಮೇರೆಗೆ ಗುರುತಿಸಿ ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ವಿಶ್ವವಿದ್ಯಾಲಯದ ವಿe್ಞÁನಿಗಳು ಮತ್ತು ಪ್ರಾಧ್ಯಾಪಕ ವೃಂದವು ನಿರಂತರ ಶ್ರಮವಹಿಸಬೇಕೆಂದು ಕೃಷಿ ವಿe್ಞÁನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ. ಹನುಮಂತಪ್ಪ ಅವರು ಹೇಳಿದರು.

ನಗರದ ಕೃಷಿ ವಿe್ಞÁನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಧಾರವಾಡದ ಬಹುಶಾಸ್ತಿಥಯ ವಿಕಾಸ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಮಸ್ಯೆಗಳು ಹಾಗೂ ಅಭಿವೃದ್ಧಿಪೂರಕ ಪಥಗಳು ಕುರಿತಾದ ೬ ದಿನಗಳ ಅವಽಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಾಸ್ತವಿಕ ಅಂಶಗಳಾದ ಕಡಿಮೆ ತಲಾ ಆದಾಯ, ಅಪೌಷ್ಟಿಕತೆ, ಕೃಷಿ ಶಿಕ್ಷಣ ಕುರಿತಾದ ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ರೂಪು-ರೇಷೆಗಳನ್ನು ನಿರ್ಧರಿಸಬೇಕೆಂದು ತರಬೇತಿಗೆ ಬಂದಿದ್ದ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಕಲಬುರಗಿ ಕೃಷಿ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸುರೇಶ್ ಪಾಟೀಲ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗವು ಹೊಂದಿರುವ ಹಿಂದುಳಿಕೆ ಎಂಬ ಹಣೆಪಟ್ಟಿಯನ್ನು ತೊಡೆದು ಹಾಕುವಲ್ಲಿ ಎ¯್ಲÁ ಶಿಬಿರಾರ್ಥಿಗಳು ಶ್ರಮಿಸಿ, ಅಭಿವೃದ್ಧಿಪೂರಕ ಕಾರ್ಯಕ್ರಮಗಳನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿ ಈ ಭಾಗದ ರೈತರ ಆದಾಯ ಹೆಚ್ಚಿಸಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಡಾ. ಜÁಗೃತಿ ದೇಶಮಾನ್ಯ, ಡಾ.ಎಸ್.ಬಿ. ಗೌಡಪ್ಪ, ಡಾ. ನಾರಾಯಣ ರಾವ್, ಡಾ.ಅಮೃತ ಜೋಶಿ,ಡಾ, ಜಿ. ಬಿ.ಲೋಕೇಶï ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net